ಕರ್ನಾಟಕ

ಮೋದಿ ಕೆಲ್ಸ ಮಾಡಿದ್ದಾರೆ,ವೋಟ್‌ ಹಾಕಿ;ಕನ್‌ಫ್ಯೂಸ್‌ ಆದ ಮುಖ್ಯಮಂತ್ರಿ

Pinterest LinkedIn Tumblr


ಮಳವಳ್ಳಿ: ನರೇಂದ್ರ ಮೋದಿ ಒಳ್ಳೆ ಕೆಲಸ ಮಾಡಿದ್ದಾರೆ. ನೀವು ನರೇಂದ್ರ ಮೋದಿಗೆ ವೋಟ್‌ ಹಾಕಿದ್ರೆ ಅದು ನನಗೆ ಹಾಕಿದಂತೆ…ಇದು ಮಂಗಳವಾರ ಶಾಸಕ ನರೇಂದ್ರ ಸ್ವಾಮಿ ಅವರ ಪರ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಗೊಂದಲಕ್ಕೊಳಗಾಗಿ ,ಬಾಯ್ತಪ್ಪಿ ಪ್ರಧಾನಿ ನರೇಂದ್ರ ಅವರನ್ನು ಹೊಗಳಿದ ಪರಿ.

ಸಿದ್ದರಾಮಯ್ಯ ಅವರು ‘ನರೇಂದ್ರ ಮೋದಿ ಒಳ್ಳೆ ಕೆಲ್ಸ ಮಾಡಿದ್ದಾರೆ’ ಅನ್ನುತ್ತಿದ್ದಂತೆ ನೂರಾರು ಕಾರ್ಯಕರ್ತರು ಹೋ..ಎಂದು ಜೋರಾಗಿ ಕೂಗಿದ್ದು, ಮೋದಿ ಅಲ್ಲ, ಸ್ವಾಮಿ ಎಂದರು. ಬಳಿಕ ಸಿಎಂ ‘ಮಳವಳ್ಳಿಗೆ ನರೇಂದ್ರ ಸ್ವಾಮಿ, ಮೋದಿ ಆ ಕಡೆ ಗುಜರಾತ್‌ಗೆ’ಎಂದರು.

ಮತ್ತೆ ಭಾಷಣ ಮುಂದುವರಿಸಿ ‘ನೀವು ನರೇಂದ್ರ ಮೋದಿಗೆ ಮತ ಹಾಕಿದರೆ ನನಗೇ ಮತ ಹಾಕಿದಂತೆ’ ಎಂದರು. ಮತ್ತೆ ಕಾರ್ಯಕರ್ತರು ಹೋ…ಎಂದು ಕೂಗಿದರು.

ಬಳಿಕ ಸರಿ ಪಡಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ನರೇಂದ್ರ ಸ್ವಾಮಿ ಅಂದರೆ ಸತ್ಯ, ನರೇಂದ್ರ ಮೋದಿ ಅಂದರೆ ಮಿಥ್ಯ’ ಎಂದರು.

-Udayavani

Comments are closed.