ಕರ್ನಾಟಕ

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತೊಂದು ಆರೋಪ ! ಕಳಂಕಿತ ಉದ್ಯಮಿಯನ್ನು ಬೇಟಿಯಾಗಿದ್ದೇಕೆ….?

Pinterest LinkedIn Tumblr

ಬೆಂಗಳೂರು : 2013 ರಲ್ಲಿ ಸಿದ್ದರಾಮಯ್ಯ ಚೀನಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಳಂಕಿತ ಉದ್ಯಮಿ ವಿಜಯ್ ಈಶ್ವರನ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಹಿಂದಿನ ಉದ್ದೇಶ ಏನಿತ್ತು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಆರೋಪಿಸಿದ್ದಾರೆ.

ಸಿದ್ದರಾಮಯ್ಯ , ವಿಜಯ್ ಈಶ್ವರನ್ ಜೊತೆಗಿರುವ ಪೋಟೋವೊಂದನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಸಂಬೀತ್ ಪಾತ್ರ, ವಿಜಯ್ ಈಶ್ವರನ್ ದೇಶದಿಂದ ತಲೆ ಮರೆಸಿಕೊಂಡಿದ್ದಾನೆ .ಅವರೊಂದಿಗೆ ಮತ್ತೊಬ್ಬ ಕಳಂಕಿತ ಉದ್ಯಮಿಯಿದ್ದು, ಅವರಿಬ್ಬರು ದೇಶಭ್ರಷ್ಟ ಎಂದು ಪರಿಗಣಿಸಲಾಗಿದೆ . ಅವರನ್ನು ಏಕೆ ಸಿದ್ದರಾಮಯ್ಯ ಭೇಟಿ ಮಾಡಿದ್ದರು ಎಂದು ಪ್ರಶ್ನಿಸಿದರು.

ಈ ಸಂಬಂಧ ಈ ತಿಂಗಳ 2 ರಂದು ದೂರು ದಾಖಲಿಸಲಾಗಿದೆ. ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ತೊಡಗಿರುವುದು ಇದರಿಂದ ಬೆಳಕಿಗೆ ಬರಲಿದೆ ಎಂದು ಸಂಬೀತ್ ಪಾತ್ರ ಹೇಳಿದ್ದಾರೆ.

ಬಿಜೆಪಿಯ ಈ ಆರೋಪಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಜಯ್ ಈಶ್ವರನ್ ಯಾರು ಅಂತಾನೇ ಗೊತ್ತಿಲ್ಲ ಎಂದು ಹೇಳಿದರು.

Comments are closed.