ಕರ್ನಾಟಕ

ಆಮಿಷ ಒಡ್ಡುವ ವಿಡಿಯೋ ಕೊಟ್ರೆ 50 ಸಾವಿರ ಬಹುಮಾನ

Pinterest LinkedIn Tumblr


ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರಿಗೆ ಆಮಿಷ ಒಡ್ಡುತ್ತಿರುವ ವಿಡಿಯೋ ದೃಶ್ಯಾವಳಿ ನೀಡಿದರೆ 50 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದು ಆ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿರುವ ರವಿ ಕೃಷ್ಣಾರೆಡ್ಡಿ ಪ್ರಕಟಿಸಿದ್ದಾರೆ.

ಅವರು, ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಹಣ, ಹೆಂಡ, ಸೀರೆ, ಕುಕ್ಕರ್‌, ಟೋಕನ್‌ ಮತ್ತಿತರ ಆಮಿಷವನ್ನು ಒಡ್ಡುತ್ತಿರುವ ಅಥವಾ ಹಂಚುತ್ತಿರುವ ವಿಶ್ವಸನೀಯ ಸ್ಟಿಂಗ್‌ ವಿಡಿಯೋ ನೀಡಿದರೆ ಅಂಥವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ.

ಅಂತಹ ವಿಡಿಯೋ ಇದ್ದವರು ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 944955945 ಸಂಪರ್ಕಿಸಬಹುದು ಎಂದೂ ಅವರು ತಿಳಿಸಿದ್ದಾರೆ.

Comments are closed.