ಕರ್ನಾಟಕ

ರಾಜಕೀಯದಲ್ಲಿರುವರೆಲ್ಲರೂ ಕಳ್ಳರೇ : ಪ್ರಕಾಶ್ ರೈ

Pinterest LinkedIn Tumblr


ಬೆಂಗಳೂರು: ನಿಮಗೆಲ್ಲಾ ಅರ್ಹತೆ ಇದೆ ರಾಜಕೀಯಕ್ಕೆ ಏಕೆ ಸೇರಬಾರದು? ಎಂದು ಕೆಲವರು ನನ್ನನ್ನು ಕೇಳುತ್ತಾರೆ. ರಾಜಕೀಯದಲ್ಲಿರುವರೆಲ್ಲರೂ ಕಳ್ಳರೇ. ಈ ಕಳ್ಳರ ಜತೆ ನನಗೇನು ಕೆಲಸ. ರಾಜಕೀಯಕ್ಕೆ ನಾನು ಸೇರಲ್ಲ ಎಂದು ನಟ ಪ್ರಕಾಶ್ ರೈ ಸ್ಪಷ್ಟಪಡಿಸಿದರು.

ಕಾರ್ಮಿಕರ ದಿನಾಚರಣೆ ಅಂಗವಾಗಿ ಕರ್ನಾಟಕ ವರ್ಕರ್ಸ್ ಯೂನಿಯನ್ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ದೇಶವನ್ನು ಉದ್ಧಾರ ಮಾಡಲು ಪಕ್ಷ ಕಟ್ಟಬೇಕಿಲ್ಲ, ಶಾಸಕ, ಸಂಸದ ಆಗಬೇಕಿಲ್ಲ. ತುಳಿತಕ್ಕೊಳಗಾದ ಸಮುದಾಯ, ಬಹುಸಂಖ್ಯಾತರು ಎನಿಸಿಕೊಂಡಿರುವ ಜತೆ ನಿಂತು ಇವರ ಸಮಸ್ಯೆಗಳಿಗೆ ಧ್ವನಿಯಾಗಿ ಶ್ರಮಿಸಿದರೆ ಸಾಕು ದೇಶ ಉದ್ಧಾರ ಆಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವುದಕ್ಕಾಗಿ ನಾನು ಬಂದಿಲ್ಲ. ಮುಂದಿನ ಅವಧಿಗೆ ಯಾವುದೇ ಪಕ್ಷವಾಗಲಿ, ಯಾರೇ ಅಧಿಕಾರಕ್ಕೆ ಬಂದರು ಮುಂದಿನ 5 -10 ರಾಜ್ಯದಲ್ಲಿ ಕೆಲಸ ಮಾಡುತ್ತೀನಿ. ಇಂದಿನವರು ಜನತೆಗೆ ಮಾಡಿರುವ ನಂಬಿಕೆ ದ್ರೋಹವನ್ನು ನಾನು ಪುನರಾವರ್ತಿಸಲ್ಲ. ಮುಂದಿನ ಎರಡು ವರ್ಷದಲ್ಲಿ ನಾನು ಮಾಡುವ ಕೆಲಸ ನೋಡಿ ನನ್ನನ್ನು ನಂಬಿ. ಈ ಭೂಮಿ, ಈ ದೇಶ ನಮ್ಮ ಹಕ್ಕನ್ನು ಯಾರು ಕಿತ್ತುಕೊಳ್ಳಲು, ಬಾಯಿ ಮುಚ್ಚಲು ಬಿಡಬಾರದು ಎಂದು ಕರೆ ಕೊಟ್ಟರು.

Comments are closed.