ರಾಷ್ಟ್ರೀಯ

ಯುವಕನನ್ನು ಚಚ್ಚಿ ಕೊಂದ ವಿಡಿಯೋ ವೈರಲ್‌: ಅಪ್ಪನಿಂದ ಎಫ್ಐಆರ್‌

Pinterest LinkedIn Tumblr


ಸಂಭಾಲ್‌, ಉತ್ತರ ಪ್ರದೇಶ : ಉದ್ಯೋಗ ಅರಸಿಕೊಂಡು ದಿಲ್ಲಿಗೆ ಹೋಗಿದ್ದ ತನ್ನ 20ರ ಹರೆಯದ ಪುತ್ರ ಅಜಬ್‌ ಸಿಂಗ್‌ ನನ್ನು ಐವರು ಯುವಕರು ಹೊಡೆದು ಹಲ್ಲೆ ನಡೆಸಿ ಸಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿರುವುದನ್ನು ಕಂಡು ಪಿತೋರಾ ಗ್ರಾಮದ ಚರಣ್‌ ಸಿಂಗ್‌ ಎಂಬವರು ದಾಖಲಿಸಿರುವ ಎಫ್ಐಆರ್‌ ಪ್ರಕಾರ ಪೊಲೀಸರು ಐವರು ಅಪರಿಚಿತ ಯುವಕರ ವಿರುದ್ದ ಕೇಸು ದಾಖಲಿಸಿಕೊಂಡಿದ್ದಾರೆ.

ವಾಟ್ಸಾಪ್‌ನಲ್ಲಿ ಐವರು ಯುವಕರು ತನ್ನ ಮಗನನ್ನು ಹೊಡೆದು ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಕಂಡು ತಾನು ದೂರು ದಾಖಲಿಸುತ್ತಿರುವುದಾಗಿ ಚರಣ್‌ ಸಿಂಗ್‌ ಹೇಳಿದ್ದಾರೆ.

ವಿಡಿಯೋದಲ್ಲಿ ಕಂಡು ಬರುತ್ತಿರುವ ಐವರು ಯುವಕರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಸರ್ಕಲ್‌ ಪೊಲೀಸ್‌ ಆಫೀಸರ್‌ ಓಂಕಾರ್‌ ಸಿಂಗ್‌ ಯಾದವ್‌ ಹೇಳಿದ್ದಾರೆ.

-ಉದಯವಾಣಿ

Comments are closed.