ಕರ್ನಾಟಕ

ಐಪಿಎಲ್ ಮ್ಯಾಚ್ ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗುವ ಮುನ್ನ ಎಚ್ಚರ!

Pinterest LinkedIn Tumblr

ಬೆಂಗಳೂರು: ಐಪಿಎಲ್​ ಪಂದ್ಯಗಳನ್ನು ನೋಡಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗುವ ಕ್ರಿಕೆಟ್​ ಅಭಿಮಾನಿಗಳು ಇನ್ನುಮುಂದೆ ಅಲ್ಲಿಗೆ ಕಾರು, ಮೆಟ್ರೋ, ಆಟೋ ಅಥವಾ ಕ್ಯಾಬ್​ನಲ್ಲಿ ಹೋಗಿ. ಬೈಕ್​ನಲ್ಲೇನಾದರೂ ಹೋದರೆ ನೀವು ಮ್ಯಾಚ್ ಮುಗಿಸಿಕೊಂಡು​ ಬರುವಷ್ಟರಲ್ಲಿ ನಿಮ್ಮ ಬೈಕ್​ ಕಳ್ಳನ ಪಾಲಾಗಿರುತ್ತೆ…

ಹೌದು ಇದು ಸತ್ಯ. ಬುಧವಾರ ಆರ್​ಸಿಬಿ-ಸಿಎಸ್​ಕೆ ಮ್ಯಾಚ್​ ನೋಡಲು ಹೋಗಿದ್ದ ಪ್ರೇಕ್ಷಕರ ಬರೋಬ್ಬರಿ 15 ಬೈಕ್​ಗಳನ್ನು ಕಳ್ಳರು ಎತ್ತಿಕೊಂಡು ಹೋಗಿದ್ದಾರೆ. ಕಬ್ಬನ್​ ಪಾರ್ಕ್​ನಲ್ಲಿ ಬೈಕ್​ ಪಾರ್ಕಿಂಗ್‌​ ಮಾಡಿ ಮ್ಯಾಚ್​ಗೆ ಹೋಗಿದ್ದ ವೇಳೆ ಕಳ್ಳರು ಬೈಕ್​ಗಳನ್ನು ಕದ್ದು ಎಸ್ಕೇಪ್​ ಆಗಿದ್ದಾರೆ. ಕಬ್ಬನ್ ಪಾರ್ಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.