
ರಾಮನಗರ: ನನ್ನ ವಿರುದ್ದ ಮಾತನಾಡಲು ಅವನು ಯಾರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿರುದ್ದ ಕಾಂಗ್ರೆಸ್ ನಾಯಕ ಜಮೀರ್ ಅಹಮದ್ ಖಾನ್ ಏಕವಚನದಲ್ಲೇ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ 22 ಲಕ್ಷ ರೂಪಾಯಿ ಹಣ ಹಂಚಿ ಚನ್ನಪಟ್ಟಣದಲ್ಲಿ ಜನ ಸೇರಿಸಿದ್ದಾನೆ. ಸಾಮರ್ಥ್ಯವಿದ್ದರೆ ಹಣ, ತಿಂಡಿ, ವಾಹನವಿಲ್ಲದೆ ಪ್ಯಾಲೇಸ್ ಗ್ರೌಂಡ್‌ನಲ್ಲಿ 5 ಸಾವಿರ ಜನರನ್ನು ಸೇರಿಸಲಿ.ನಾನು ಅವರ ಕಾಲ ಅಡಿಯಲ್ಲಿ ತೂರುತ್ತೇನೆ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿ ಮೇಲೆ ಅಭಿಮಾನದಿಂದ ಜನ ಸೇರುತ್ತಿಲ್ಲ.ಅವರ ಹಣ ಪಡೆದು ಜನ ಸೇರುತ್ತಿದ್ದಾರೆ ಎಂದರು.
‘ಮೈಸೂರು ಭಾಗದ ನನ್ನ ಸಮುದಾಯದ ಜನರು ನನ್ನನ್ನು ನೋಡಿ ಕಾಂಗ್ರೆಸ್ ಸೇರುತ್ತಾರೆ. ನನ್ನ ಜನರು ಕಾಸಿಗೆ ಬದುಕಿಲ್ಲ’ ಎಂದರು.
‘ಕುಮಾರಸ್ವಾಮಿ ಮುಸ್ಲಿಮರನ್ನು ತುರ್ಕರು ಎಂದು ಜರಿದಿದ್ದಾರೆ. ಹೇಳುವುದನ್ನು ಹೇಳಿ ಈಗ ನಾನು ಹೇಳಲಿಲ್ಲ ಅನ್ನುತ್ತಿದ್ದಾರೆ. ಶಾ ಭೇಟಿಯ ಬಗ್ಗೆ ಕೇಳಿದರೆ ಬ್ಯಾ ಬ್ಯಾ ಅನ್ನುತ್ತಿದ್ದಾರೆ’ ಎಂದು ಕಿಡಿ ಕಾರಿದರು.
‘ನಾನು 52 ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ನನ್ನ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಿಲ್ಲ’ ಎಂದರು.
-ಉದಯವಾಣಿ
Comments are closed.