ರಾಷ್ಟ್ರೀಯ

ಡ್ರೈವಿಂಗ್‌ ವೇಳೆ ಮೊಬೈಲ್ ಬಳಸಿದ್ರೆ ಡ್ರೈವಿಂಗ್ ಲೈಸೆನ್ಸ್ ರದ್ದು

Pinterest LinkedIn Tumblr


ಹೊಸದಿಲ್ಲಿ: ರಾಜಸ್ಥಾನದಲ್ಲಿ ಇನ್ನು ಮುಂದೆ ನೀವು ಗಾಡಿ ಓಡಿಸುವಾಗ ಎಚ್ಚರವಾಗಿರಿ. ಯಾಕಂದ್ರೆ, ನೀವು ಮೊಬೈಲ್ ಫೋನ್ ಬಳಕೆ ಮಾಡಿದ್ರೆ, ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಳ್ಳಬೇಕಾಗುತ್ತೆ.

ಹೆಚ್ಚು ಮಂದಿ ವಾಹನ ಸವಾರರು ಗಾಡಿ ಓಡಿಸುವಾಗ ಮೊಬೈಲ್ ಫೋನ್ ಬಳಕೆ ಮಾಡುತ್ತಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ರಾಜಸ್ಥಾನ ಹೈಕೋರ್ಟ್‌ನ ಜೋಧಪುರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಹಾಗೂ ನಿಯಮ ಉಲ್ಲಂಘನೆ ಮಾಡುವವರ ಫೋಟೋಗಳನ್ನು ಪಡೆದು ಆರ್‌ಟಿಓಗೆ ಹಾಕಿ. ಈ ಮೂಲಕ ಅವರ ಡ್ರೈವಿಂಗ್ ಲೈಸೆನ್ಸ್‌ಗಳನ್ನು ರದ್ದುಗೊಳಿಸಬಹುದು ಎಂದು ಜೋಧಪುರ ಕೋರ್ಟ್‌ ನಿರ್ದೇಶನ ನೀಡಿದೆ.

ಜೋಧಪುರ ಹೈಕೋರ್ಟ್ ವಿಭಾಗೀಯ ಪೀಠದ ಜಡ್ಜ್‌ಗಳಾದ ಗೋಪಾಲ ಕೃಷ್ಣನ್‌ ವ್ಯಾಸ್ ಹಾಗೂ ರಾಮಚಂದ್ರ ಸಿಂಗ್ ಝಾಲಾ ಈ ತೀರ್ಪು ನೀಡಿದ್ದಾರೆ. ನಿಯಮ ಉಲ್ಲಂಘನೆ ಹಾಗೂ ಅಪಘಾತ ಪ್ರಕರಣಗಳಲ್ಲಿ ಮೊಬೈಲ್ ಫೋನ್ ಬಳಸಿ ವಾಹನ ಸವಾರ ಮಾಡುತ್ತಿರುವುದು ಹೆಚ್ಚು ಎಂದು ಅಲ್ಲಿನ ಸಂಚಾರ ಎಸಿಪಿ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ರಾಜಸ್ಥಾನ ಹೈಕೋರ್ಟ್‌ ಈ ತೀರ್ಮಾನಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.

ವಿಶ್ವದಾದ್ಯಂತ ಮೊಬೈಲ್ ಫೋನ್ ಬಳಕೆ ಮಾಡುತ್ತಿರುವುದರಿಂದ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ ಮಾಡಿದ್ರೆ, ಅಪಘಾತಕ್ಕೆ ಒಳಗಾಗುವ ಸಾಧ್ಯತೆ 4 ಪಟ್ಟು ಹೆಚ್ಚು ಎಂದೂ ವಿಶ್ವ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Comments are closed.