ಕರ್ನಾಟಕ

ನಮ್ಮೂರಿಗೆ ಕಾಲಿಡಬೇಡಿ: ಮೋಟಮ್ಮ ಪುತ್ರಿಗೆ ಗ್ರಾಮಸ್ಥರ ತರಾಟೆ

Pinterest LinkedIn Tumblr


ಚಿಕ್ಕಮಗಳೂರು: ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಪರವಾಗಿ ಚುನಾವಣೆ ಪ್ರಚಾರಕ್ಕೆ ತೆರಳಿದ್ದ ಅವರ ಮಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.

ಎಂಎಲ್‌ಸಿಯಾಗಿ, ಶಾಸಕಿಯಾಗಿ ನಿಮ್ಮ ತಾಯಿ‌ ನಮಗೆ ಏನು ಮಾಡಿದ್ದಾರೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಗ್ರಾಮಸ್ಥರ ಪ್ರಶ್ನೆಗೆ ಮೊದಲು ಕಕ್ಕಾಬಿಕ್ಕಿಯಾದ ನಯನ ಮೋಟಮ್ಮ, ಬಳಿಕ ಗ್ರಾಮಸ್ಥರ ಜತೆ ವಾಗ್ವಾದಕ್ಕೆ ನಿಂತರು. ಆಗ ಗ್ರಾಮಸ್ಥರು, ಈ ಗ್ರಾಮಕ್ಕೆ ಕಾಲಿಡಬೇಡಿ ಎಂದು ನಯನ ಮೋಟಮ್ಮ ಅವರಿಗೆ ತಾಕೀತು ಮಾಡಿದರು.

ಮೋಟಮ್ಮ ಪುತ್ರಿಗೆ ಗ್ರಾಮಸ್ಥರ ತರಾಟೆ

ಅದೇನು ಮಾಡುತ್ತೀರೋ ನೋಡೋಣ ಎಂದು ನಯನ ಮೋಟಮ್ಮ ಗ್ರಾಮಕ್ಕೆ ಪ್ರವೇಶಿಸಿದರು. ಆಗ ಮಾತಿಗೆ ಮಾತು ಬೆಳೆದು ಕಾಂಗ್ರೆಸ್‌ ಕಾರ್ಯಕರ್ತರು ಗ್ರಾಮಸ್ಥರ ಮೇಲೆ ಹಲ್ಲೆಗೆ ಮುಂದಾದರು. ಗ್ರಾಮದ ಒಳಗೆ ಕಾಂಗ್ರೆಸ್ ಪರ ಪ್ರಚಾರಕ್ಕೆ ಬರದಂತೆ ಆವತಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಆವತಿ ಗ್ರಾಮದಲ್ಲಿ ಘಟನೆ ನಡೆದಿದೆ.

Comments are closed.