ಕರ್ನಾಟಕ

ನನಗೆ ಮರಾಠಿ ಬರಲ್ಲ ,ಕ್ಷಮಿಸಿ ..!; ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ

Pinterest LinkedIn Tumblr


ಚಿಕ್ಕೋಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಡಿ ನಾಡು ಬೆಳಗಾವಿಯಲ್ಲಿ ಕಾಂಗ್ರೆಸ್‌ಗೆ ಮತ ಸೆಳೆಯಲು ಭಾಷಾ ಪ್ರೇಮ ಮೆರೆದಿದ್ದು, ‘ನನಗೆ ಮರಾಠಿ ಬರಲ್ಲ, ಕ್ಷಮಿಸಿ’ ಎಂದು ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡಿ ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಿಪ್ಪಾಣಿ ಕಾಂಗ್ರೆಸ್‌ ಅಭ್ಯರ್ಥಿ ಕಾಕಾ ಸಾಹೇಬ ಪಾಟೀಲ್‌ ಮತ್ತು ಚಿಕ್ಕೋಡಿ ಅಭ್ಯರ್ಥಿ ಗಣೇಶ್‌ ಹುಕ್ಕೇರಿ ಅವರ ಪರ ಗಡಿ ಭಾಗದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಪಕ್ಷದ ಬಹಿರಂಗ ಸಭೆಯಲ್ಲಿ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮಕ್ಕೆ 2 ಗಂಟೆ ತಡವಾಗಿ ತೆರಳಿದ ಸಿಎಂ ಅದಕ್ಕೂ ಕ್ಷಮೆ ಯಾಚಿಸಿದರು.

ಕಾಯಕ್ರಮದ ವೇದಿಕೆಯಲ್ಲಿ ಅಳವಡಿಸಲಾಗಿದ್ದ ಮುಖ್ಯ ಬ್ಯಾನರ್‌ನಲ್ಲೂ ಮರಾಠಿ ರಾರಾಜಿಸುತ್ತಿತ್ತು.

-ಉದಯವಾಣಿ

Comments are closed.