ಕರ್ನಾಟಕ

ಆರು ವರ್ಷದ ಮಗಳ ಮೇಲೆಯೇ ಲೈಂಗಿಕ ಕಿರುಕುಳ : ಬೆಂಗಳೂರು ಟೆಕಿ ವಿರುದ್ಧ ಪ್ರಕರಣ ದಾಖಲು

Pinterest LinkedIn Tumblr

ಬೆಂಗಳೂರು : ಆರು ವರ್ಷದ ಮಗಳ ಮೇಲೆಯೇ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇರೆಗೆ 37 ವರ್ಷದ ಸಾಪ್ಟ್ ವೇರ್ ಎಂಜಿನಿಯರ್ ಒಬ್ಬರ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಎರಡು ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು, ಕೆಂಗೇರಿ ಪೊಲೀಸರು ಈಗ ಎಫ್ ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಸಂಬಂಧ ಮಹಿಳೆಯೊಬ್ಬರು 2016ರಲ್ಲಿ ಖಾಸಗಿ ದೂರು ಸಲ್ಲಿಸಿ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಈಗ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ ಮಹಿಳೆ ಕೂಡಾ ಸಾಪ್ಟ್ ವೇರ್ ಎಂಜಿನಿಯರ್ ಆಗಿದ್ದು, 2006ರಲ್ಲಿ ಅವಿನಾಶ್ ಜಾ ಎಂಬವರನ್ನು ವಿವಾಹವಾಗಿದ್ದರು. ಬಿಹಾರದ ಮೂಲದವರಾದ ಈ ದಂಪತಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

ಸ್ವೀಡನ್ ನಲ್ಲಿದ್ದಾಗ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ನ್ಯಾಯಾಲಯದ ಮೂಲಕ ವಿಚ್ಚೇಧನ ಪಡೆದುಕೊಂಡಿದ್ದಾರೆ. ಮೊದಲ ಮಗಳನ್ನು ಅವಿನಾಶ್ ಜಾ ಅವರ ವಶಕ್ಕೆ ನ್ಯಾಯಾಲಯ ಒಪ್ಪಿಸಿದೆ.

ನಂತರ ಈ ದಂಪತಿ ಏ.2016ರಲ್ಲಿ ಭಾರತಕ್ಕೆ ಹಿಂದಿರುಗಿದ್ದು, ಮಹಿಳೆ ಎರಡನೇ ಮಗಳ ಜೊತೆ ಬಿಹಾರದಲ್ಲಿ ವಾಸಿಸುತ್ತಿದ್ದರು. ಅವಿನಾಶ್ ಬೆಂಗಳೂರಿನ ಕೋರಮಂಗಲದಲ್ಲಿ ಮೊದಲ ಮಗಳೊಂದಿಗೆ ವಾಸಿಸುತ್ತಿದ್ದ ಎನ್ನಲಾಗಿದೆ.

2016ರಲ್ಲಿ ಕೋರಮಂಗಲದ ಮಾಲ್ ವೊಂದರಲ್ಲಿ ಹಿರಿಯ ಮಗಳನ್ನು ತಾಯಿ ಭೇಟಿಯಾದ್ದಾಗ, ಅವಿನಾಶ್ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿರುವುದು ಗೊತ್ತಾಗಿದೆ. ತಂದೆಯೊಂದಿಗೆ ಇರಲು ಸಾಧ್ಯವಿಲ್ಲ. ದೂರ ಕರೆದುಕೊಂಡು ಹೋಗುವಂತೆ ಮಗಳು ತಾಯಿಯನ್ನು ಒತ್ತಾಯಿಸಿದ್ದಾಳೆ.

ಆದಾಗ್ಯೂ, ಮಗಳನ್ನು ಕರೆದುಕೊಳ್ಳದ ತಾಯಿ ಬಿಹಾರಕ್ಕೆ ಹೋಗಿದ್ದರು. ತದನಂತರ ಅವಿನಾಶ್ ಮತ್ತು ಆಕೆಯ ಮಗಳೊಂದಿಗೆ ಸಂಪರ್ಕ ಕಳೆದುಕೊಂಡಿದ್ದಳು. ಹೀಗೆ ಆಕೆ ನ್ಯಾಯಾಲಯದಲ್ಲಿ ಆಕೆ ದೂರು ಸಲ್ಲಿಸಿದ್ದಳು.

ಈ ಪ್ರಕರಣ ಈಗ ನಮ್ಮ ಬಳಿ ಬಂದಿದೆ. ಆದರೆ, ಆತನ ಪ್ರಸ್ತುತ ಕೆಲಸ ಹಾಗೂ ನಿವಾಸದ ವಿಳಾಸ ಸಿಗುತ್ತಿಲ್ಲ. ಆದರೂ ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.