ಕರ್ನಾಟಕ

ವರುಣಾದಲ್ಲಿ ಪಕ್ಷಾತೀತವಾಗಿ ವಿಜಯೇಂದ್ರ ಬೆಂಬಲಿಸಿ ಎಂದ ಜಿಟಿಡಿ !!

Pinterest LinkedIn Tumblr


ಮೈಸೂರು: ವರುಣಾದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಟಿಕೆಟನ್ನು ಕೊನೆ ಕ್ಷಣದಲ್ಲಿ ಹಿಂಪಡೆದುಕೊಂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ಇದಕ್ಕೆ ಸಾಕ್ಷಿಯಾಗಿ ಚಾಮುಂಡೇಶ್ವರಿ ಕ್ಷೇತ್ರದ ಸಿಎಂ ಸಿದ್ದರಾಮಯ್ಯ ವಿರೋಧಿ ಜೆಡಿಎಸ್‌ ಅಭ್ಯರ್ಥಿ, ಶಾಸಕ ಜಿ.ಟಿ.ದೇವೇಗೌಡ ಅವರು ವಿಜಯೇಂದ್ರ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಟಿಡಿ ‘ವರುಣಾದಲ್ಲಿ ಯಾವುದೆ ಕಾರಣಕ್ಕೂ ವಿಜಯೇಂದ್ರಗೆ ಟಿಕೆಟ್‌ ಕೊಡದೆ ಇರಬಾರದು. ಇದೊಂದು ಧರ್ಮಯುದ್ಧವಾಗಿದ್ದು ಪಕ್ಷಾತೀತವಾಗಿ ಬೆಂಬಲ ನೀಡಬೇಕು’ ಎಂದಿದ್ದಾರೆ.

‘ಶ್ರೀನಿವಾಸ್‌ ಪ್ರಸಾದ್‌ ಅವರು ಬಿಜೆಪಿ ನಾಯಕರ ಬಳಿ ಗಲಾಟೆ ಮಾಡಿ ಆದರು ವಿಜಯೇಂದ್ರಗೆ ಟಿಕೆಟ್‌ ಕೊಡಿಸಬೇಕು’ ಎಂದರು.

ಪುತ್ರನ ಸ್ಪರ್ಧೆ ಇಲ್ಲ

‘ನನ್ನ ಪುತ್ರ ಹರೀಶ್‌ಗೌಡನಿಗೆ ವರುಣಾದಲ್ಲಿ ಕಾರ್ಯಕರ್ತ ಒತ್ತಡವಿದೆ. ಆದರೆ ಈ ಬಾರಿ ನಿಲ್ಲುವುದಿಲ್ಲ. ಅಲ್ಲಿಂದ ಬೇರೆ ಅಭ್ಯರ್ಥಿ ನಿಲ್ಲುತ್ತಾರೆ. ನಾನು, ಹರೀಶ್‌ ಅಲ್ಲಿ ಕೆಲಸ ಮಾಡುತ್ತೇವೆ, ಎಂದರು.

-ಉದಯವಾಣಿ

Comments are closed.