ಕರ್ನಾಟಕ

ಲಂಚದ ಬೇಡಿಕೆ: ಜಲನಿಗಮದ ಅಧಿಕಾರಿ ಎಸಿಬಿ ಬಲೆಗೆ

Pinterest LinkedIn Tumblr


ವಿಜಯಪುರ: ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಯೊಬ್ಬರು ವಿಜಯಪುರದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ನಿಜಲಿಂಗಪ್ಪ ಸಾಂಬಾ ಎಸಿಬಿ ಬಲೆಗೆ ಬಿದ್ದ ಎಂಜಿನಿಯರ್.

ಕೆಬಿಜೆಎನ್ಎಲ್‌ನಲ್ಲಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಆಗಿ ನಿಜಲಿಂಗಪ್ಪ ಕೆಲಸ ಮಾಡುತ್ತಿದ್ದಾರೆ. ಸೆಕ್ಯೂರಿಟಿ ಡಿಪಾಜಿಟ್ ಹಣ ವಾಪಸ್ ನೀಡಲು 10 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ಗುತ್ತಿಗೆದಾರ ಬಾಬು ಬಿಜ್ಜರಗಿ ಬಳಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಆಲಮೇಲ್ ಭಾಗದಲ್ಲಿ 1.96 ಕೋಟಿ ರೂ. ಕಾಮಗಾರಿಗೆ 16 ಲಕ್ಷ ರೂ. ಸೆಕ್ಯೂರಿಟಿ ಡೆಪಾಸಿಟ್ ಆಗಿ ಇಟ್ಟಿದ್ದ ಗುತ್ತಿಗೆದಾರನಿಗೆ ಹಣ ವಾಪಸ್ ಪಡೆಯಲು ನಿಜಲಿಂಗಪ್ಪ 10 ಸಾವಿರ ರೂ. ಲಂಚ ಕೇಳಿದ್ದರು. ಬಿಎಲ್‌ಡಿ ಬಳಿಯಿರುವ ಪ್ರಭು ಕ್ಯಾಂಟೀನ್ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

Comments are closed.