ರಾಷ್ಟ್ರೀಯ

ಪತ್ನಿಯ ಶೀಲ ಶಂಕಿಸಿ 2 ತಿಂಗಳ ಮಗುವನ್ನೇ ಕೊಂದ ಅಪ್ರಾಪ್ತ!

Pinterest LinkedIn Tumblr


ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ಮಂಗೋಲ್‌ಪುರಿ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಡೆದ ಅತ್ಯಂತ ಅಮಾನುಷ ಮತ್ತು ಕಳವಳಕಾರಿ ಘಟನೆಯೊಂದರಲ್ಲಿ ಅಪ್ರಾಪ್ತ ವಯಸ್ಕನೋರ್ವ ತನ್ನ 2 ತಿಂಗಳ ಮಗುವನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ.

ತನ್ನ ಪತ್ನಿಯ ಅನೈತಿಕ ಸಂಬಂಧದಿಂದಾಗಿ ಈ ಮಗು ಹುಟ್ಟಿದೆ ಎಂದು ಪತ್ನಿ ಮನೆಯಲ್ಲಿ ಮಗುವನ್ನು ಬಿಟ್ಟು ಕೆಲಸ ಹುಡುಕಲೆಂದು ಹೊರೆಗೆ ತೆರಳಿದ ವೇಳೆ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾನೆ.

ಮನೆಗೆ ಮರಳಿದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದನ್ನು ಕಂಡು ಬೆಚ್ಚಿ ಬಿದ್ದ ತರುಣಿ ಕೂಡಲೇ ಆಸ್ಪತ್ರೆಗೆ ದೌಡಾಯಿಸಿದ್ದಾಳೆ. ಅಲ್ಲಿ ಮಗು ಮೃತ ಪಟ್ಟಿರುವುದನ್ನು ವೈದ್ಯರು ಧೃಡಪಡಿಸಿದ್ದಾರೆ.

ಪೊಲೀಸರಿಗೆ ದೂರು ನೀಡಿದ ಬಳಿಕ ಕೂಡಲೇ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಪೊಲೀಸರ ಬಳಿ ನನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ.ಅದರಿಂದಾಗಿಯೇ ಮಗು ಹುಟ್ಟಿದೆ ಹೀಗಾಗಿ ಕೊಲೆಗೈದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಇಬ್ಬರು ಅಪ್ರಾಪ್ತ ವಯಸ್ಕರಾಗಿದ್ದು 10 ತಿಂಗಳ ಹಿಂದೆ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ.

– ಉದಯವಾಣಿ

Comments are closed.