ಕರ್ನಾಟಕ

ಕಾಂಗ್ರೆಸ್‌ ಸಭೆಯಲ್ಲಿನ ಬಾಡೂಟ ವಶ

Pinterest LinkedIn Tumblr


ಸಕಲೇಶಪುರ: ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಸಿದ್ಧಪಡಿಸಿದ್ದ ಬಾಡೂಟವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ತಾಲೂಕಿನ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಸಕಲೇಶಪುರ-ಆಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಿದ್ದಯ್ಯ ಅವರು ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಿದ್ದರು. ಕಲ್ಯಾಣ ಮಂಟಪದ ಹೊರಭಾಗದಲ್ಲಿ ಸಸ್ಯಹಾರ ಊಟದ ವ್ಯವಸ್ಥೆ ಮಾಡಿದ್ದರೆ, ಒಳಭಾಗದಲ್ಲಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 4 ಕ್ವಿಂಟಲ್‌ಗ‌ೂ ಅಧಿಕ ಬಿರಿಯಾನಿ ಹಾಗೂ ಕಬಾಬ್‌, ಒಂದು ಕ್ವಿಂಟಲ್‌ಗ‌ೂ ಅಧಿಕ ತರಕಾರಿ ಪಲಾವ್‌ ಸಿದಟಛಿಪಡಿಸಿದ್ದರು.
ಸಭೆ ಮುಕ್ತಾಯದ ಹಂತಕ್ಕೆ ಬಂದ ವೇಳೆ ಬಿರಿಯಾನಿ ಸವಿಯಲು ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರು ಮುಗಿಬಿದ್ದರು. ಈ ವೇಳೆ ಮಾಹಿತಿ ಅರಿತ ತಾಲೂಕು ಚುನಾವಣಾಧಿಕಾರಿ, ತಹಶೀಲ್ದಾರ್‌ ನಾಗಭೂಷಣ್‌ ನೇತೃತ್ವದ ತಂಡ ಬಾಡೂಟವನ್ನು ವಶಕ್ಕೆ ಪಡೆದರು. ಇದರಿಂದ ಕೆರಳಿದ ಜನರು ಅಧಿಕಾರಿಗಳ ಮೇಲೆ ಹರಿಹಾಯ್ದರು.

ಖಾಸಗಿ ಬಸ್‌ನಲ್ಲಿದ್ದ 16 ಲಕ್ಷ ವಶಕ್ಕೆ
ಖಾಸಗಿ ಬಸ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 16 ಲಕ್ಷ ರೂ.ಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ರಾಣಿ ಸರ್ಕಲ್‌ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುವ ಖಾಸಗಿ ಪ್ರವಾಸಿ ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ಖಾಸಗಿ ಬಸ್‌ನಲ್ಲಿ ಶನಿವಾರ ಬೆಳಗ್ಗೆ 7.15ರ ಸಮಯದಲ್ಲಿ 5.10 ಲಕ್ಷ ರೂ. ನಗದನ್ನು ಪ್ರಯಾಣಿಕರಾದ ವೆಂಕಟೇಶ್‌ ಎಂಬುವವರು ತೆಗೆದುಕೊಂಡು ಹೋಗುತ್ತಿದ್ದರು. ಮತ್ತೂಂದು ಖಾಸಗಿ ಬಸ್‌ನಲ್ಲಿ ಬೆಳಗ್ಗೆ 10.90 ಲಕ್ಷ ರೂ. ಹಾಗೂ 2 ಕೆಜಿ ಬೆಳ್ಳಿ, 6 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ಬಿಇಒ ವಿರುದ್ಧ ಕ್ರಿಮಿನಲ್‌ ಕೇಸ್‌
ಧಾರವಾಡ: ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಶಿಕ್ಷಣ ಅಧಿಕಾರಿ ಶೇಖ್‌ ಬಷೀರ್‌ ಅಲಿಖಾನ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಶೇಖ್‌ ಬಷೀರ್‌ ಅಲಿಖಾನ್‌ ಅವರನ್ನು ಮಾ.29ರಂದು ಧಾರವಾಡ ಗ್ರಾಮೀಣ-71 ಮತಕ್ಷೇತ್ರದ ಫ್ಲೆಯಿಂಗ್‌ ಸ್ಕ್ಯಾಡ್‌ (ಮ್ಯಾಜಿಸ್ಟೇಟ್‌)ಆಗಿ ನೇಮಿಸಲಾಗಿತ್ತು. ಆದರೆ ನೇಮಕ ಮಾಡಿದಾಗಿನಿಂದ ಏ.20ರವರೆಗೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಈ ಬಗ್ಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದರೂ ಅದಕ್ಕೆ ಉತ್ತರವನ್ನೂ ನೀಡಿಲ್ಲ. ಶೇಖ್‌ ಬಷೀರ್‌ ಅಲಿಖಾನ್‌ ವಿರುದಟಛಿ ಧಾರವಾಡ ಗ್ರಾಮೀಣ-71ರ ಮತಕ್ಷೇತ್ರದ ಚುನಾವಣಾಧಿಕಾರಿ ಜಯಮಾಧವ ಪಿ. ಅವರು ಉಪನಗರ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದಾರೆ.

-ಉದಯವಾಣಿ

Comments are closed.