ಕರ್ನಾಟಕ

ತಾಪಮಾನ ಏರಿಕೆ ನಡುವೆ ತಂಪೆರೆದ ಮಳೆರಾಯ

Pinterest LinkedIn Tumblr


ಬೆಂಗಳೂರು: ನಗರದಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗುತ್ತಿದ್ದಂತೆ ಗುಡುಗು ಸಹಿತ ಮಳೆ ಆರಂಭವಾಗಿದೆ. ಜಯನಗರ, ಮಲ್ಲೇಶ್ವರಂ, ಕೆಂಗೇರಿ, ವಿಧಾನಸೌಧ, ಚಾಮರಾಜ ಪೇಟೆ, ಯಲಹಂಕದಲ್ಲಿ, ಯಶವಂತಪುರ ಸೇರಿದಂತೆ ಎಲ್ಲೆಡೆ ಮಳೆಯಾಗುತ್ತಿದೆ.

ಏಪ್ರಿಲ್ ಆರಂಭದಲ್ಲೇ ಸೃಷ್ಟಿಯಾದ ಟ್ರಫ್ ನಿಂದಾಗಿ ಕೆಲ ದಿನಗಳವರೆಗೆ ಮಳೆ ಸುರಿ ದಿತ್ತು. ಟ್ರಫ್ (ದಟ್ಟ ಮೋಡಗಳ ಸಾಲು) ಮುಂದುವರೆದಿರುವುದರಿಂದ ಏ.21ರಿಂದ 23ರವರೆಗೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಎಂದು ಹವಾಮಾನ ಇಲಾಖೆ ನೀಡಿದೆ.

20ರಿಂದ 23ರವರೆಗೆ ಬಿರುಗಾಳಿ, ಗುಡುಗು ಸಹಿತ ಮಳೆಯಾಗಲಿದೆ. ಕಳೆದ ಏ.19ರಂದು ನಗರದಲ್ಲಿ 73 ಮಿ.ಮೀ ಮಳೆ ದಾಖ ಲಾಗಿತ್ತು. ಇದು ವಾಡಿಕೆಗಿಂತ 38ಮಿ.ಮೀ ಅಧಿಕ. ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ ಹಾಗೂ ಮೈಸೂರು ಮುಂತಾದ ಕಡೆ ಮುಂದಿನ 23ರಿಂದ ಒಂದೆರೆಡು ದಿನ ಮಳೆಯಾಗುವ ಸಾಧ್ಯತೆ ಇದೆ.

ನಗರದಲ್ಲಿ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್, ಕೆಐಎಎಲ್ ಗರಿಷ್ಠ 34.8ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.2 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್ ನಲ್ಲಿ ಗರಿಷ್ಠ 34.7 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.9ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕಲಬುರಗಿ ಯಲ್ಲಿ ಗರಿಷ್ಠ 41.8 ಡಿಗ್ರಿ ಉಷ್ಣಾಂಶ ದಾಖಲಾಗಿದೆ.

Comments are closed.