ಕರ್ನಾಟಕ

ಸಿಡಿಲಿನ ಮುನ್ಸೂಚನೆ ನೀಡಬಲ್ಲ ಮೊಬೈಲ್ ಆ್ಯಪ್ ಬಿಡುಗಡೆ

Pinterest LinkedIn Tumblr


ಬೆಂಗಳೂರು: ಮಳೆಗಾಲದಲ್ಲಿ ಸಿಡಿಲಿನ ಆರ್ಭಟ ಸಾಮಾನ್ಯವಾಗಿರುತ್ತದೆ. ಇತ್ತೀಚೆಗೆ ರಾಜ್ಯದಲ್ಲಿ ಸಿಡಿಲಿಗೆ ಬಲಿಯಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಉತ್ತರವೆನ್ನುವಂತೆ ಸಿಡಿಲು ಹಾಗೂ ಬಿಸಿ ಗಾಳಿಯ ಮುನ್ಸೂಚನೆಯನ್ನು ಪಡೆಯಬಹುದಾದಂತಹ ನೂತನ ಮೊಬೈಲ್ ಆ್ಯಪನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬಿಡುಗಡೆ ಮಾಡಿದೆ.

ಮಳೆಯ ಮುನ್ಸೂಚನೆ ತಿಳಿದುಕೊಳ್ಳುವಂತೆಯೇ ಇದನ್ನು ಬಳಸಿ ಇನ್ನು ಸಿಡಿಲಿನ ಮುನ್ಸೂಚನೆಯನ್ನೂ ತಿಳಿಯಬಹುದಾಗಿದೆ. ಹೀಗೆ ಮುಂಚಿತವಾಗಿ ಅಪಾಯದ ಬಗ್ಗೆ ತಿಳಿದು ಮುನ್ನೆಚ್ಚರಿಕೆ ವಹಿಸಲು ಸಹಕಾರಿಯಾಗುವಂತೆ ಆ್ಯಪನ್ನು ರಚಿಸಲಾಗಿದೆ.

ಸಿಡಿಲಿನಿಂದುಟಾಗುವ ಸಾವನ್ನು ತಪ್ಪಿಸುವಲ್ಲಿ ಇದು ಪ್ರಮುಖವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ.

ಇದುವರೆಗೆ ಮುಂಗಾರು, ಹಿಂಗಾರಿನ ಮಳೆ ವಿವರಗಳು, ಅದರ ಮುನ್ಸೂಚನೆ ನಿಡಬಲ್ಲ ಆ್ಯಪ್ ಮಾತ್ರ ಲಭ್ಯವಿತ್ತು. ಇದೀಗ ಸಿಡಿಲು ಮತ್ತು ಬಿಸಿಗಾಳಿಯ ಮುನ್ಸೂಚನೆ ಒದಗಿಸುವ ಆ್ಯಪ್ ಲಭ್ಯವಾಗುತ್ತಿರುವುದು ನಾಗರಿಕರಿಗೆ ಸಾಕಷ್ಟು ಅನುಕೂಲ ಕಲ್ಪಿಸಲಿದೆ.

Comments are closed.