ಕರ್ನಾಟಕ

Own wife ಅಲ್ಲಿ ಸೋತಿದ್ರಲ್ಲ; ಎಚ್‌ಡಿಕೆಗೆ ಸಿಎಂ ಸಿದ್ದರಾಮಯ್ಯ ಲೇವಡಿ

Pinterest LinkedIn Tumblr


ಮೈಸೂರು: ಚುನಾವಣಾ ರಣಕಣದಲ್ಲಿ ರಾಜಕಾರಣಿಗಳ ವಾಗ್ಯುದ್ಧ ತೀವ್ರವಾಗಿದ್ದುಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿ ವಿರುದ್ಧಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ತೀವ್ರ ಕಿಡಿ ಕಾರಿದ್ದಾರೆ.

ಟಿ.ಕೆ.ಬಡಾವಣೆಯಲ್ಲಿರುವ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ 2006 ರಲ್ಲಿ ಸಿಎಂ ಆಗಿದ್ದಾಗ ಬಂದಿದ್ದರು. ಆ ಬಳಿಕ ಈಗ ಬಂದಿದ್ದಾರೆ. ಕ್ಷೇತ್ರಕ್ಕೆ ಅವರು ಮಾಡಿರುವ ಮೂರು ಕಾಸಿನ ಕೆಲಸ ಯಾವುದು? ಅವರು ಚಾಮುಂಡೇಶ್ವರಿ ಗ್ರಾಮಗಳನ್ನು ದತ್ತು ಪಡೆಯುವ ಬದಲು ರಾಮನಗರದಲ್ಲಿ ದತ್ತು ಪಡೆಯಲಿ’ ಎಂದರು.

ಚನ್ನಪಟ್ಟಣದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಲಿ ಎಂಬ ಎಚ್‌ಡಿಕೆ ಸವಾಲಿನ ಕುರಿತು ಪ್ರತಿಕ್ರಿಯೆ ನೀಡಿ ‘ಚನ್ನಪಟ್ಟಣದಲ್ಲಿ ಅವರ ಪತ್ನಿ ಸೋತಿದ್ರಲ್ಲಾ , ಅವರ ಸ್ವಂತ ಹೆಂಡತಿ ಸೋತಿದ್ದರಲ್ಲ. ಚಿಕ್ಕಬಳ್ಳಾಪುರದಲ್ಲಿ ಕುಮಾರಸ್ವಾಮಿ ಸೋತದ್ದು ಯಾಕೆ’ ಎಂದು ಪ್ರಶ್ನಿಸಿದರು.

-ಉದಯವಾಣಿ

Comments are closed.