ಕರ್ನಾಟಕ

ಕರ್ನಾಟಕ ರಾಜಕೀಯದಲ್ಲಿ ನಡೆಯಲ್ಲ ‘ಸ್ಟಾರ್ ಡಂ’: ಪ್ರಮುಖ ಪಾತ್ರ ವಹಿಸುತ್ತದೆ ‘ಕ್ಯಾಸ್ಟಿಸಂ’

Pinterest LinkedIn Tumblr


ಬೆಂಗಳೂರು: ಮೇ 12 ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು ಅದಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ತಯಾರಿ ನಡೆಸುತ್ತಿವೆ.ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಹಲವು ಚಿತ್ರ ನಟರಿಗೆ ತಮ್ಮ ಪಕ್ಷದಿಂದ ಟಿಕೆಟ್ ನೀಡಿದ್ದಾರೆ. ಅಂಬರೀಷ್, ಉಮಾಶ್ರಿ, ಬಿ,ಸಿ ಪಾಟೀಲ್, ಮುನಿರತ್ನ,ಕುಮಾರ್ ಬಂಗಾರಪ್ಪ, ನೆ.ಲ ನರೇಂದ್ರ ಬಾಬು, ಸಿ.ಪಿ ಯೋಗೇಶ್ವರ್ ಚಿತ್ರರಂಗದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಾಗಿದ್ದಾರೆ.

ರಾಜಕೀಯ ಪಕ್ಷಗಳು ಸ್ಟಾರ್ ಗಳನ್ನು ಕಣಕ್ಕಿಳಿಸಿವೆ, ಆದರೆ ಇವರ ಭವಿಷ್ಯ ನಿರ್ಧಾರವಾಗುವುದು ಅವರ್ ಸ್ಟಾರ್ ಗಿರಿಯಿಂದಲ್ಲ, ಜಾತಿ ಆಧಾರದ ಮೇಲೆ. ಬಳ್ಳಾರಿ ಅಥವಾ ಚಿತ್ರದುರ್ಗದಿಂದ ಸ್ಪರ್ದಿಸುವಂತೆ ಸುದೀಪ್ ಅವರಿಗೆ ಆಹ್ವಾನ ನೀಡಲಾಗಿತ್ತು ಎಂದು ರಾಜಕೀಯ ಮತ್ತು ಸಿನಿಮಾ ವಲಯಗಳಲ್ಲಿ ಮಾತು ಕೇಳಿ ಬಂದಿತ್ತು. ಬಿಜೆಪಿಯಿಂದ ಸ್ಪರ್ಧಿಸುವಂತೆ ಉಪೇಂದ್ರಗೆ ಆಫರ್ ನೀಡಲಾಗಿತ್ತು,. ನಾಯಕ ಸಮುದಾಯಕ್ಕೆ ಸೇರಿದ ಸುದೀಪ್ ಮೇಲೆ ಕಾಂಗ್ರೆಸ್ ಕಣ್ಣಿತ್ತು, ಹೀಗಾಗಿ ಸ್ಪರ್ದಿಸುವಂತೆ ಆಹ್ವಾನಿಸಿತ್ತು,.

ಕೆಲವು ಸ್ಟಾರ್ ಗಳು ರಾಜಕೀಯ ಪಕ್ಷ ಮತ್ತು ರಾಜಕಾರಣಿಗಳ ಜೊತೆ ಗುರುತಿಸಿಕೊಂಡಿದ್ದರು, ಇದರಲ್ಲಿ ಎಷ್ಟು ಮಂದಿ ಟಿಕೆಟ್ ಗಿಟ್ಟಿಸಿಕೊಂಡರು ಎಂಬುದೇ ಪ್ರಶ್ನೆಯಾಗಿದೆ, ಜಗ್ಗೇಶ್, ಶಶಿಕುಮಾರ್, ರಾಕ್ ಲೈನ್ ವೆಂಕಟೇಶ್, ಭಾವನ ಮತ್ತು ಜಯಮಾಲಾ ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದರು.

ಕರ್ನಾಟಕ ರಾಜಕೀಯದಲ್ಲಿ ಸ್ಟಾರ್ ಗಿರಿ ಯಾವತ್ತೂ ಪ್ರಮುಖ ಪಾತ್ರ ವಹಿಸಿಲ್ಲ, ಅಂಬರೀಷ್, ಉಮಾಶ್ರೀ, ರಮ್ಯಾ, ಬಿ.ಸಿ ಪಾಟೀಲ್, ಶಶಿಕುಮಾರ್, ರಾಜಕೀಯ ಪ್ರವೇಶಿಸಿ ಅದರಲ್ಲಿ ಗೆಲುವು ಸಾಧಿಸಲು ಅವರ ಜಾತಿ ಕಾರಣವಾಗಿತ್ತು ಎಂದು ರಾಜಕೀಯ ವಿಶ್ಲೇಷಕ ಆರ್ ಎಲ್ ಎಂ ಪಾಟೀಲ್ ಹೇಳಿದ್ದಾರೆ,

ಪಕ್ಕದ ರಾಜ್ಯಗಳಿಗೆ ಹೋಲಿಸಿದರೇ ಕರ್ನಾಟಕದಲ್ಲಿ ಸ್ಟಾರ್ ಡಂ ಪ್ರಭಾವ ಕಡಿಮೆ, ಡಾ. ರಾಜ್ ಕುಮಾರ್ ರಾಜಕೀಯ ಪ್ರವೇಶಿಸದೇ ಹೆಚ್ಚು ಬುದ್ದಿವಂತಿಕೆ ತೋರಿದರು. ಆದರೆ ಈ ವಿಚಾರವಾಗಿ ಎಂ ಜಿಆರ್ ಅವರು ಪೆರಿಯಾರ್ ಮತ್ತು ಕರುಣಾನಿಧಿ ಅವರಿಂದ ಸೈದ್ಧಾಂತಿಕ ವಾಗಿ ಮಾರ್ಗದರ್ಶನ ಪಡೆದರು, ಆದರೆ ಕರ್ನಾಟಕದಲ್ಲಿನ ಸ್ಟಾರ್ ಗಳಿಗೆ ರಾಜಕೀಯ ಸಿದ್ಧಾಂತ ಅಷ್ಟೊಂದು ತಿಳಿದಿಲ್ಲ, ಪಕ್ಷಗಳು ಅವರ ಜನಪ್ರಿಯತೆಯನ್ನು ಬಳಸಿಕೊಳ್ಳುತ್ತಿವೆ,

ಕರ್ನಾಟಕದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ರಾಜಕೀಯ ಏಳಿಗೆ ಕಂಡಿದ್ದಾರೆ, ರಾಜಕೀಯ ಪ್ರವೇಶಿಸಿದ ಚಿತ್ರರಂಗದ ಹಲವರು ಸೋಲನುಭವಿಸಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೇ ಉಪೇಂದ್ರ, ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಲೈಕ್ಸ್ ಮತ್ತು ವ್ಯೂ ಗಳಿಂದಲೇ ರಾಜಕೀಯದಲ್ಲಿ ಗೆಲ್ವಬಹುದು ಎಂದು ಉಪೇಂದ್ರ ನಿರ್ಧಿರಿಸಿದ್ದರು.

ನೀವು ಪಕ್ಷವನ್ನು ನೋಂದಾಯಿಸದಿದ್ದರೇ ಸ್ವತಂತ್ರ್ಯವಾಗಿ ಕಣಕ್ಕಿಳಿಯಬೇಕು, ಯುದ್ದರಂಗ ಬಿಟ್ಟು ಓಡಿಹೋಗಬಾರದು. ಚುನಾವಣೆಗೆ ನಿಂತಿದ್ದ ಹಲವು ಚಿತ್ರರಂಗ ಗಣ್ಯರು 4 ಅಂಕಿಗಳ ಮತಗಳನ್ನು ಪಡೆದಿರಲಿಲ್ಲ.

ಸ್ಟಾರ್ ಪವರ್ ಗಿಂತ ಅವರ ಜಾತಿಯೇ ಕರ್ನಾಟಕ ರಾಜಕೀಯದಲ್ಲಿ ಪ್ರಾಮುಖ್ಯತೆ ವಹಿಸಿದೆ, ಅಂಬರೀಷ್. ಉಮಾಶ್ರೀ, ಅವರಿಗೆ ಅವರ ಜಾತಿ ಆಧಾರದ ಮೇಲೆ ಟಿಕೆಟ್ ನೀಡಲಾಗಿದೆ,ಭಾಷೆಯ ಗುರುತು ಇಲ್ಲಿ ಮುಖ್ಯವಾಗುವುದಿಲ್ಲ, ಹಲವು ಸ್ಟಾರ್ ಗಳಿಗೆ ಜಾತಿ ಸಮೀಕರಣ ಲೆಕ್ಕವಾಗುವುದಿಲ್ಲ ಜೊತೆಗೆ ಅವರು ಎಂದಿಗೂ ಜಾತಿವಾದಿಗಳಾಗಿರುವುದಿಲ್ಲ, ಹಾಗಾಗಿ ಅವರ ರಾಜಕೀಯ ಬದುಕು ಮೊಟಕಾಗುತ್ತದೆ.

Comments are closed.