ಕರ್ನಾಟಕ

ಕಠುವಾರೇಪ್‌ ಬಗ್ಗೆ ಟೀಕಿಸುವ ರಾಹುಲ್‌ಗೆ ಕರ್ನಾಟಕದಲ್ಲಿ ಆಗಿರುವ ಘಟನೆ ಕಂಡಿಲ್ಲವೇ: ರಾಜೀವ್‌ ಚಂದ್ರಶೇಖರ್‌

Pinterest LinkedIn Tumblr


ಬೆಂಗಳೂರು: ಎಂಟು ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ನಿಜಕ್ಕೂ ಅತ್ಯಂತ ಖಂಡನೀಯ ಇದನ್ನು ಯಾರು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಇದನ್ನು ರಾಜಕೀಯಗೊಳಿಸುವುದು ಸೂಕ್ತವಲ್ಲ ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

ಘಟನೆ ಕುರಿತು ರಾಹುಲ್‌ ಗಾಂಧಿ ಹೇಳಿಕೆ ನೀಡಿರುವುದಕ್ಕೆ ರಾಜೀವ್‌ ಚಂದ್ರಶೇಖರ್‌ ಪ್ರತಿಕ್ರಿಯೆ ನೀಡಿದ್ದು, ತೀವ್ರ ಕಾಂಗ್ರೆಸ್‌ ಅಧ್ಯಕ್ಷರ ದ್ವಿಮುಖ ಧೋರಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರದ ಬಾಲಕಿಯ ಮೇಲೆ ನಡೆಸಿರುವ ದೌರ್ಜನ್ಯ ಯಾರೂ ಊಹಿಸಲು ಕಷ್ಟ. ತಪ್ಪಿತಸ್ಥರಿಗೆ ಘೋರ ಶಿಕ್ಷೆ ವಿಧಿಸಬೇಕು ಎಂದು ಸಂಸದರು ಆಗ್ರಹಿಸಿದರು.

ಕರ್ನಾಟಕದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆಯೂ ಸರಕಾರ ಗಮನಹರಿಸಬೇಕು. ಕಳೆದ ನಾಲ್ಕು ವರ್ಷಗಳಿಂದಲೂ ಇದಕ್ಕಾಗಿ ನಾನು ಹೋರಾಡುತ್ತಿದ್ದೇನೆ. ಆದರೆ ಸರಕಾರ ಯಾವುದೇ ಆಸಕ್ತಿಯನ್ನು ತೋರುತ್ತಿಲ್ಲ ಎಂದು ದೂರಿದರು.

2014, 2015ರಲ್ಲಿಯೇ ಈ ಕುರಿತು ರಾಹುಲ್‌ ಗಾಂಧಿ, ಸಿದ್ದರಾಮಯ್ಯಗೆ ಪತ್ರ ಬರೆದು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕಾನೂನು ರೂಪಿಸುವಂತೆ ಆಗ್ರಹಿಸಲಾಗಿತ್ತು. ಆದರೆ ಇದುವರೆಗೆ ರಾಹುಲ್‌ ಆಗಲಿ, ಸಿದ್ದರಾಮಯ್ಯ ಈಗ ಬಗ್ಗೆ ತುಟಿ ಬಿಚ್ಚೇ ಇಲ್ಲ ಎಂದು ರಾಜೀವ್‌ ಆರೋಪಿಸಿದರು.

ಕರ್ನಾಟಕದಲ್ಲಿ ಅತಿ ಹೆಚ್ಚು ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವ ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಮಕ್ಕಳ ದೌರ್ಜನ್ಯ ತಡೆ ಸೊಸೈಟಿ ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಚುನಾವಣೆ ಪ್ರಚಾರದ ವೇಳೆ ಟೆಂಪಲ್‌ ರನ್‌ ನಡುವೆ ಬಿಡುವು ಮಾಡಿಕೊಂಡರೆ ರಾಹುಲ್‌ ಗಾಂಧಿ ಜತೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಎಸೆದರು.

Comments are closed.