ಕರ್ನಾಟಕ

ಪಂಚಪೀಠದವರಿಂದ ನನ್ನ ವಿರುದ್ಧ ಪ್ರಚಾರ, ಸ್ವಾಮೀಜಿಯೊಬ್ಬರು ರೆಕಾರ್ಡಿಂಗ್‌ ಕಳಿಸಿದ್ದಾರೆ: ಸಚಿವ ಪಾಟೀಲ್‌

Pinterest LinkedIn Tumblr


ದಾವಣಗೆರೆ: ಪಂಚಪೀಠದವರು ನನ್ನ ವಿರುದ್ಧ ಪ್ರಚಾರ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ.ಪಂಚಪೀಠದ ಗುರುಗಳು ಏನೇನು ಮಾತನಾಡಿದ್ದಾರೆ ಅಂತ ಗೊತ್ತಾಗಿದೆ. ಬಬಲೇಶ್ವರದ ಸ್ವಾಮೀಜಿಯೊಬ್ಬರು ರೆಕಾರ್ಡಿಂಗ್ ಕಳುಹಿಸಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

ಕನಕ ಗುರುಪೀಠದ ಹರಿಹರದ ಬೆಳ್ಳೂಡಿ ಶಾಖಾ ಮಠದಲ್ಲಿ ಮಾತನಾಡಿದ ಅವರು, ಧರ್ಮ ಒಡೆದವರನ್ನು ಅಗಸ ಬಟ್ಟೆ ಒಗೆದ ಹಾಗೆ ಒಗಿಬೇಕು ಅಂತ ಹೇಳಿದ್ದಾರೆ. ನನಗೆ ಮತ ಹಾಕದಂತೆ ಪ್ರಚಾರ ಮಾಡುತ್ತಿದ್ದಾರೆ.ಇದು ನೀತಿ ಸಂಹಿತೆ ಉಲ್ಲಂಘನೆ ಎಂದರು.

‘ನಾನು ಯಾರಿಗೂ ಹೆದರುವುದಿಲ್ಲ. ಬಸವ ಜನ್ಮ ಭೂಮಿಯಿಂದ ಬಂದವನು. ಚುನಾವಣೆಗೋಸ್ಕರ ಲಿಂಗಾಯತ ಪ್ರತ್ಯೇಕ ಧರ್ಮ ಮಾಡುತ್ತಿಲ್ಲ. ಲಿಂಗಾಯತರು ಯಾರ ವಿರೋಧಿಗಳೂ ಅಲ್ಲ. ಬಸವ ಧರ್ಮ ಜಾಗತಿಕ ಧರ್ಮ ಆಗಬೇಕಿತ್ತು. ಬಸವಣ್ಣ ಗೆಲ್ಲಬೇಕು, ಲಿಂಗಾಯತ ಜಾಗತಿಕ ಧರ್ಮ ಆಗಬೇಕು.
ನಾನೂ, ಕೂಡಲ ಸಂಗಮ ಸ್ವಾಮೀಜಿ ಜತೆಯಲ್ಲೇ ಬಂದು ಕನಕ ಶ್ರೀಗಳನ್ನ ಭೇಟಿ ಮಾಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸಚಿವರು ಹೇಳಿದರು.

ಪಂಚಪೀಠಾಧೀಶರ ವಿರುದ್ಧ ಜಯಮೃತ್ಯುಂಜಯ ಶ್ರೀ ಗರಂ

ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆ ನೀಡಿದ್ದಕ್ಕೆ ಹತಾಶೆಗೊಂಡಿದ್ದಾರೆ. ಬೇಸರದಿಂದ ಸರಕಾರ ಮತ್ತು ಮುಖಂಡರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ನಾವು ಧಾರ್ಮಿಕ ಶೋಷಣೆ ವಿರುದ್ಧ ಹೋರಾಡಿದ್ದೇವೆ ಹೊರತು ಬೇರೆ ಯಾರ ವಿರುದ್ಧವೂ ಅಲ್ಲ. ಅದನ್ನೇ ಇವರು ತಪ್ಪಾಗಿ ತಿಳಿದು ಈ ರೀತಿ ಮಾತನಾಡುತ್ತಿದ್ದಾರೆ. ನಾವು ಇದಕ್ಕೆ ಬೆಲೆ ಕೊಡುವುದಿಲ್ಲ ಎಂದರು. ಅವರು ಒಂದು ದಿನ ನಮ್ಮಕಡೆ ಬಂದೇ ಬರುತ್ತಾರೆ ಎಂದು ಜಯಮೃತ್ಯುಂಜಯ ಶ್ರೀ ಹೇಳಿದರು.

Comments are closed.