ರಾಷ್ಟ್ರೀಯ

ಸೇನಾ ಶಸ್ತ್ರಾಸ್ತ್ರ ತಯಾರಿಕೆಯ ತವರು… ಬೆಂಗಳೂರಿನ ಹೊಸ ಹೆಗ್ಗಳಿಕೆ

Pinterest LinkedIn Tumblr


ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ “ಮೇಕ್‌ ಇನ್‌ ಇಂಡಿಯಾ’ ಯೋಜನೆಯಡಿ ಭಾರತವು ಪ್ರಮುಖ ಶಸ್ತ್ರಾಸ್ತ್ರ ತಯಾರಿಕಾ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಬೆಂಗಳೂರು ನಗರ ಇದರ ಕೇಂದ್ರ ಸ್ಥಾನವಾಗಲಿದೆ. ಈ ಮೂಲಕ, ಈಗಾಗಲೇ ಉದ್ಯಾನನಗರಿ, ಸಿಲಿಕಾನ್‌ ಸಿಟಿ ಎಂಬಂಥ ಹಲವು ಹೆಗ್ಗಳಿಕೆಗಳನ್ನು ಹೊಂದಿರುವ ಬೆಂಗಳೂರಿನ ಮುಕುಟಕ್ಕೆ ಈಗ ಮತ್ತೂಂದು ಗರಿ ಸೇರ್ಪಡೆಗೊಂಡಿದೆ.

ಭಾರತಕ್ಕೆ ಕಾಲಿಟ್ಟ ದೈತ್ಯ ಕಂಪನಿಗಳು
ಬೆಂಗಳೂರಿಗೆ ಇಂಥದ್ದೊಂದು ಯೋಜನೆ ಬರಲು, ಪ್ರಸ್ತುತ, ತಮಿಳುನಾಡಿನ ತಿರುವಿದಾಂತೈನಲ್ಲಿ ನಡೆಯುತ್ತಿರುವ “ರಕ್ಷಣಾ ಇಲಾಖೆಯ ವಸ್ತು ಪ್ರದರ್ಶನ 2018′ (ಡಿಫೆನ್ಸ್‌ ಎಕ್ಸ್‌ಪೋ) ಕಾರಣ. ಇಲ್ಲಿ ಭಾಗಿಯಾಗಿರುವ ವಿಶ್ವದ ಪ್ರತಿಷ್ಠಿತ ಶಸ್ತ್ರಾಸ್ತ್ರ ತಯಾರಿಕಾ ಕಂಪನಿಗಳಾದ ಡೆಸರ್ಟ್‌ ಟೆಕ್‌ (ಯುಎಸ್‌ಎ) ಹಾಗೂ ಸ್ಟೈರ್‌ ಮ್ಯಾನ್ಲಿಚರ್‌ (ಆಸ್ಟ್ರೇಲಿಯಾ) ಕಂಪನಿಗಳು, ಭಾರತದ ಐದು ಕಂಪನಿಗಳ ಸಹಭಾಗಿತ್ವದಲ್ಲಿ ಶಸ್ತ್ರಾಸ್ತ್ರ ತಯಾರಿಸಲಿವೆ.

ಬೆಂಗಳೂರಲ್ಲೇನು ತಯಾರಾಗುತ್ತೆ?
ಬೆಂಗಳೂರಿನಲ್ಲಿ ಲಘು ಮೆಷೀನ್‌ ಗನ್‌ ಹಾಗೂ ಶಕ್ತಿಶಾಲಿ ರೈಫ‌ಲ್‌ಗ‌ಳನ್ನು ತಯಾರಿಸಲು ಕಂಪನಿಗಳು ನಿರ್ಧರಿಸಿವೆ. ಈ ಬಂದೂಕುಗಳಿಗೆ ಬೇಕಾದ ಕಾಡತೂಸುಗಳು ಹಾಗೂ ಹೆಚ್ಚುವರಿ ಸಲಕರಣೆಗಳು ಚೆನ್ನೈನಲ್ಲಿ ತಯಾರಾಗಲಿವೆ.

ಯೋಜನೆಯ ಲಾಭ
ಜಾಗತಿಕ ಮಟ್ಟದ ಸೇನಾ ಶಸ್ತ್ರಾಸ್ತ್ರ ತಯಾರಿಕಾ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ.
ಬೆಂಗಳೂರಲ್ಲಿ ಶಸ್ತ್ರಾಸ್ತ್ರ ತಯಾರಿಸುವ ಡೆಸರ್ಟ್‌ ಟೆಕ್‌, ಸ್ಟೈರ್‌ ಮ್ಯಾನ್ಲಿಚರ್‌ ಕಂಪನಿಗಳಿಗೆ ಜೆಕ್‌ ಗಣರಾಜ್ಯ, ಯುಎಇ, ಲಿಥುಯೇನಿಯಾ, ಥಾಯ್ಲೆಂಡ್‌, ಅಮೆರಿಕ, ಯುಕೆ, ನ್ಯೂಜಿಲೆಂಡ್‌ ಸೇನೆಗಳೇ ಪ್ರಧಾನ ಗ್ರಾಹಕರು. ಹಾಗಾಗಿ, ಬೆಂಗಳೂರಲ್ಲಿ ತಯಾರಾಗುವ ಈ ಬಂದೂಕುಗಳು ಈ ದೇಶಗಳಿಗೆ “ಮೇಡ್‌ ಇನ್‌ ಇಂಡಿಯಾ’ ಮುದ್ರೆಯಡಿ ಸರಬರಾಜು.
ಭವಿಷ್ಯದಲ್ಲಿ ಭಾರತದ ಸೇನೆಗೆ ಅತ್ಯಾಧುನಿಕ ಬಂದೂಕು, ಮದ್ದು ಗುಂಡುಗಳನ್ನು ಕೊಳ್ಳುವ ಯೋಜನೆ ಇರುವುದರಿಂದ, ದೇಶೀಯವಾಗಿ ಉತ್ಪಾದನೆ ಯಾಗಲಿರುವ ಈ ಅತ್ಯಾಧುನಿಕ ಬಂದೂಕುಗಳು ಕಡಿಮೆ ಬೆಲೆಗೆ ಭಾರತೀಯ ಸೇನೆಗೆ ಲಭ್ಯ.

ಯಾರಿಂದ ಯಾವ ಶಸ್ತ್ರಾಸ್ತ್ರ ತಯಾರು?
ತಯಾರಕ: ಡೆಸರ್ಟ್‌ ಟೆಕ್‌, ಯುಎಸ್‌ಎ
ಎಸ್‌ಆರ್‌ಎ-ಎ 1 ಸ್ನೆ„ಪರ್‌ ರೈಫ‌ಲ್‌
ಪ್ರಯೋಜನ: ಬಹು ಕಾಡತೂಸುಗಳ ನಿರ್ವಹಣೆ, ಬೋಲ್ಟ್ ಆ್ಯಕ್ಷನ್‌ ಮಾದರಿ ಕಾರ್ಯ, ಏಳು ಕ್ಯಾಟ್ರಿಜ್‌ ನಡುವೆ ಸಮನ್ವಯತೆ, ಗರಿಷ್ಠ ಗುರಿ: 3.6 ಅಡಿಯಿಂದ 6 ಅಡಿ
ಎಸ್‌ಆರ್‌ಎಸ್‌ ಎ1 ಕನ್ವರ್ಟ್‌
ಪ್ರಯೋಜನ: ಏಕಕಾಲದಲ್ಲಿ ಮೂರು ತೋಟಾ ಅಳವಡಿಕೆ, ಗರಿಷ್ಠ ಗುರಿ: 3ರಿಂದ 5.4 ಅಡಿ
ಹಾರ್ಡ್‌ ಟಾರ್ಗೆಟ್‌ ಇಂಟರ್‌ಡಿಕ್ಷನ್‌ (ಎಚ್‌ಟಿಐ ರೈಫ‌ಲ್‌)
ಪ್ರಯೋಜನ: ನಾಲ್ಕು ತೋಟಾಗಳ ಅಳವಡಿಕೆ, ಗರಿಷ್ಠ ಗುರಿ: 7.2ರಿಂದ 9 ಅಡಿ

ತಯಾರಕ: ಸ್ಟೈರ್‌ ಮ್ಯಾನ್ಲಿಚರ್‌, ಆಸ್ಟ್ರೇಲಿಯಾ ಸ್ಟೈರ್‌ ಆಗ್‌ ಎ1
ಪ್ರಯೋಜನ: ಬಹು ಬ್ಯಾರೆಲ್‌ಗ‌ಳ ನಿರ್ವಹಣೆ, ಅನಿಲ ಆಧಾರಿತ ಸೆಮಿ ಅಥವಾ ಪೂರ್ಣ ಪ್ರಮಾಣದ ಸ್ವಯಂಚಾಲಿತ ಶಸ್ತ್ರಾಸ್ತ್ರ.
ಸ್ಟೈರ್‌ ಎಸ್‌ಎಸ್‌ಜಿ 08
ಪ್ರಯೋಜನ: ಬೋಲ್ಟ್ ಆ್ಯಕ್ಷನ್‌ ಸ್ಪೈಪರ್‌ ರೈಫ‌ಲ್‌ , ಕಾಡತೂಸುಗಳ ಫೀಡರ್‌ ಬಾಕ್ಸ್‌ (ಮ್ಯಾಗಜಿನ್‌) ಯುಕ್ತ

-ಉದಯವಾಣಿ

Comments are closed.