ಕರ್ನಾಟಕ

ಗಂಡಸೇ ಆಗಿದ್ರೆ ಗೆಲ್ಲು: ರಾಮುಲುಗೆ ತಿಪ್ಪೇಸ್ವಾಮಿ ಸವಾಲು

Pinterest LinkedIn Tumblr


ಚಿತ್ರದುರ್ಗ: ನೀನು ಗಂಡಸೇ ಆಗಿದ್ದರೆ ಬಳ್ಳಾರಿಯಲ್ಲಿ ನಿಂತು ಗೆಲ್ಲು. ಅಲ್ಲಿ ಸೋಲುವ ಭಯದಿಂದ ಚಿತ್ರದುರ್ಗದಲ್ಲಿ ಬಂದು ಸ್ಪರ್ಧೆ ಮಾಡುತ್ತಿದ್ದೀಯಾ. ಇದು ಮದಕರಿ ನಾಯಕನ ಜಿಲ್ಲೆೆ ನಿನ್ನ ಆಟ ನಡೆಯುವುದಿಲ್ಲ ಎಂದು ಶಾಸಕ ಎಸ್. ತಿಪ್ಪೇಸ್ವಾಾಮಿ ಶ್ರೀರಾಮುಲುಗೆ ಬಹಿರಂಗ ಸವಾಲು ಹಾಕಿದ್ದಾರೆ.

ಮೊಳಕಾಲ್ಮೂರಿನಿಂದ ಬಿಜೆಪಿಯಿಂದ ಟಿಕೆಟ್ ಲಭಿಸದಿದ್ದಕ್ಕೆೆ ಆಕ್ರೋಶಗೊಂಡಿರುವ ಹಾಲಿ ಶಾಸಕ ತಿಪ್ಪೇಸ್ವಾಮಿ, ಸಂಸದ ಹಾಗೂ ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದು, ಯಾವ ಪಕ್ಷದಿಂದಲೂ ಟಿಕೆಟ್ ನೀಡಿದರೆ ಸ್ಪರ್ಧೀಸಲು ಸಿದ್ಧ ಎಂದು ಹೇಳಿದ್ದಾರೆ.

ಇಂದು ತಮ್ಮ ನಿವಾಸದಲ್ಲಿ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಸ್ಪರ್ಧೆ ಮಾಡಲು ಬೆಂಬಲಿಗರು ಒತ್ತಾಯಿಸುತ್ತಿದ್ದು ಯಾವ ಪಕ್ಷದಿಂದಲೂ ಟಿಕೆಟ್ ಸಿಕ್ಕರೆ ಸ್ಪರ್ಧಿಸುತ್ತೇನೆ. ಸಿಗದಿದ್ದರೆ ಪಕ್ಷೇತರನಾಗಿ ಕಣಕ್ಕಿಳಿಯುತ್ತೇನೆ ಎಂದು ಹೇಳಿದರು. ಶ್ರೀರಾಮುಲು ಬಳ್ಳಾರಿಯಲ್ಲಿ ಚುನಾವಣೆಗೆ ನಿಂತರೆ ಗೆಲ್ಲುವುದಿಲ್ಲ. ಅದಕ್ಕಾಗಿ ಚಿತ್ರದುರ್ಗಕ್ಕೆೆ ಓಡಿ ಬಂದಿದ್ದಾರೆ ಎಂದು ಶ್ರೀರಾಮುಲು ವಿರುದ್ಧ ಕಿಡಿಕಾರಿದರು. ಅಲ್ಲದೇ ಯಾರೇ ನಿಂತರೂ ಗೆಲುವು ನನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೀಸಲು ಕ್ಷೇತ್ರವಾಗಿರುವ ಮೊಳಕಾಲ್ಮೂರಿನಲ್ಲಿ ಹಾಲಿ ತಿಪ್ಪೇಸ್ವಾಮಿಯವರು ಶಾಸಕರಾಗಿದ್ದು, ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ವಾಲ್ಮೀಕಿ ಸಮುದಾಯದ ನಾಯಕ ಶ್ರೀರಾಮುಲು ಅವರಿಗೆ ಬುಲಾವ್ ನೀಡಲಾಗಿತ್ತು. ಕ್ಷೇತ್ರದಲ್ಲಿ ರಾಮುಲು ಸ್ಪರ್ಧಿಸುತ್ತಾರೆ ಎಂದು ತಿಳಿದಾಗ ಸಾವಿರಾರು ಮಂದಿ ತಿಪ್ಪೇಸ್ವಾಮಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಶ್ರೀರಾಮುಲು ಮೊಳಕಾಲ್ಮೂರಿಗೆ ಬಂದಾಗ ಪೊರಕೆ ಹಾಗೂ ಚಪ್ಪಲಿಯ ಸ್ವಾಗತ ನೀಡಿದ್ದರು.

Comments are closed.