ರಾಷ್ಟ್ರೀಯ

ಮಗಳಿಗೆ ಆಸಿಫಾಳ ಹೆಸರಿಟ್ಟ ಪತ್ರಕರ್ತ: ಸಾಮಾಜಿಕ ಜಾಲತಾಣದಲ್ಲಿ ವೈರಲ್‌

Pinterest LinkedIn Tumblr


ಕಾಸರಗೋಡು: ಮಗಳಿಗೆ ಆಸಿಫಾಳ ಹೆಸರಿಟ್ಟ ಪತ್ರಕರ್ತ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಅಭಿನಂದನೆಗಳಿಗೆ ಕಾರಣನಾಗಿದ್ದಾನೆ. ಕ್ರೂರ ಘಟನೆಯ ಮೂಲಕ ದೇಶವಾಸಿಗಳ ಮನಸನ್ನು ಘಾಸಿಗೊಳಿಸಿದ ಘಟನೆಯ ಮಧ್ಯೆ ಮಗಳಿಗೆ ಕಾಶ್ಮೀರಿ ಹೆಣ್ಣು ಮಗುವಿನ ಹೆಸರನ್ನಿಟ್ಟು ಪತ್ರಕರ್ತನೋರ್ವ ಹೊಸ ಸಂಚಲನವನ್ನು ಮೂಡಿಸಿದ್ದಾನೆ. ಘಟನೆಯನ್ನು ಖಂಡಿಸಿ ತನ್ನ ಮಗಳಿಗೆ ಆಸಿಫಾಳ ಹೆಸರನ್ನು ನಾಮಕರಣ ಮಾಡುವ ಮೂಲಕ ನ್ಯಾಯಕ್ಕಾಗಿ ರಂಗಕ್ಕೆ ಇಳಿದಿದ್ದಾನೆ.

ಪೇಜ್ ಮೂಲಕ ಮಗಳಿಗೆ ಆಸಿಫಾ ಎಸ್.ರಾಜ್ ಎನ್ನುವ ಹೆಸರಿಟ್ಟಿರುವುದಾಗಿ ತಿಳಿಸಿರುವ ಪತ್ರಕರ್ತನೀಲೇಶ್ವರ ನಿವಾಸಿ ರಜಿತ್ ರಾಂ ಎಲ್ಲರ ಮೆಚ್ಚುಗೆಗೆ ಪಾತ್ರರಾದ ವ್ಯಕ್ತಿ. ಕಣ್ಣೂರು ಮಾತೃಭೂಮಿ ಪತ್ರಿಕೆಯ ಉಪ ಸಂಪಾದಕರಾಗಿರುವ ರಜಿತ್ ರಾಂ ಮಲಯಾಳಂ ಪೋಸ್ಟ್ ಈಗ ವೈರಲಾಗಿದೆ. ಅಮಾನುಷವಾಗಿ ಕೊಲೆಗೈಯಲ್ಪಟ್ಟ ಕಾಶ್ಮೀರಿ ಬಾಲಕಿಗೆ ನ್ಯಾಯ ದೊರಕಬೇಕು ಎಂಬ ಏಕದೃಷ್ಠಿಯಿಂದ ತಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ರಜಿತ್ ರಾಂ ತಿಳಿಸಿದ್ದಾರೆ. ದೂರದ ಕಾಶ್ಮೀರಾದಲ್ಲಿಯೂ ರಜಿತ್ ರಾಂ ಪೋಸ್ಟ್ ಸುದ್ದಿ ಪ್ರಶಂಸೆ ಮತ್ತು ಚರ್ಚೆಗೂ ಕಾರಣವಾಗಿದೆ.

“ಹೆಸರಿಟ್ಟೆ; ಅದೇ, ಅದೇ ಹೆಸರು. ಆಸಿಫಾ ಎಸ್.ರಾಜ್. ನನ್ನ ಮಗಳವಳು” ಎಂದು ರಜಿತ್ ರಾಂ ತನ್ನ ಪುಟ್ಟ ಮಗಳ ಪೋಟೊದೊಂದಿಗೆ ಪೋಸ್‌ಟ್ ಅಪ್‌ಲೋಡ್ ಮಾಡಿದ್ದಾರೆ. ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ 25,000 ಲೈಕ್ಸ್, 16,024 ದಷ್ಟು ಶೇರ್ ಆಗಿದೆ. ಫೆಬ್ರವರಿ ತಿಂಗಳಲ್ಲಿ ರಜಿತ್ ರಾಂ ನ ಎರಡನೇ ಮಗಳು ಜನಿಸಿದ್ದು. ಮಗಳಿಗೆ ನಾಮಕರಣ ಮಾಡಲು ಹೆಸರು ಹುಡುಕುತ್ತಿದ್ದ ಸಂದರ್ಭ ಎಂಟು ವರ್ಷದ ಬಾಲೆ ಘಟನೆ ಬೆಳಕಿಗೆ ಬಂದಿದ್ದು, ಆ ಹೆಸರೇ ಸೂಕ್ತ ಮತ್ತು ಸಮಂಜಸ ಎನ್ನುವ ದೃಷ್ಟಿಯಿಂದ ತಾನು ಮಗಳಿಗೆ ಈ ಹೆಸರಿಟ್ಟೆ ಎಂದು ರಜಿತ್ ರಾಂ ಹೇಳಿದ್ದಾರೆ.

Comments are closed.