ಕರ್ನಾಟಕ

ಉ.ಪ್ರ. ಸಿಎಂ ಯೋಗಿಗೆ ದಿನೇಶ್ ಗುಂಡೂರಾವ್ ಏಕವಚನದಲ್ಲಿ‌ ನಿಂದನೆ

Pinterest LinkedIn Tumblr


ಬೆಂಗಳೂರು: ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್‌ ಈ ಬಾರಿ ಕರ್ನಾಟಕಕ್ಕೆ ಬಂದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಕೆಪಿಸಿಸಿ ‌ಕಾರ್ಯಾಧ್ಯಾಕ್ಷ ದಿನೇಶ್ ಗುಂಡೂರಾವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ಮೌರ್ಯ ಸರ್ಕಲ್ ನ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಈ ಹೇಳಿಕೆ ನೀಡಿದರು.

ಅವನು ಯೋಗಿ ಆದಿತ್ಯ ‌ನಾಥ್ ಅಲ್ಲ ಢೋಂಗಿ ಆದಿತ್ಯ ‌ನಾಥ್. ಮುಖ್ಯಮಂತ್ರಿ ಸ್ಥಾನದಲ್ಲಿ ಇರೋದಕ್ಕೆ ಅವನು‌ ನಾಲಾಯಕ್. ಕೂಡಲೇ ಪ್ರಧಾನಿ ನರೇಂದ್ರ ‌ಮೋದಿ ಅವನನ್ನು ಸಿಎಂ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಏಕವಚನದಲ್ಲಿಯೇ ನಿಂದಿಸಿದರು.

ಅವನು ಕರ್ನಾಟಕಕ್ಕೆ ಬಂದ್ರೆ ನಾಡಿಗೆ ಅಪಮಾನ ವಾಗುತ್ತೆ… ಅವನು ಏನಾದ್ರು ‌ಮತ್ತೆ ಕರ್ನಾಟಕಕ್ಕೆ ಬಂದ್ರೆ ಚಪ್ಪಲಿಯಲ್ಲಿ ಹೊಡೆಯಿರಿ. ಅವರ ಎಂಎಲ್ ಎ ಅತ್ಯಾಚಾರ ಮಾಡಿದ್ರೂ ಕ್ರಮ ತೆಗೆದುಕೊಂಡಿಲ್ಲ. ಮತ್ತೊಮ್ಮೆ ಯೋಗಿ ರಾಜ್ಯಕ್ಕೆ ಬಂದರೆ ಬುದ್ಧಿಕಲಿಸುತ್ತೇವೆ ಎಂದು ದಿನೇಶ್ ಗುಂಡೂರಾವ್ ಗುಡುಗಿದರು.

Comments are closed.