ರಾಷ್ಟ್ರೀಯ

ಉನ್ನಾವೋ ರೇಪ್‌: ಬಿಜೆಪಿ ಶಾಸಕ ಸೆಂಗರ್‌ 7 ದಿನ ಪೊಲೀಸ್‌ ಕಸ್ಟಡಿಗೆ

Pinterest LinkedIn Tumblr


ಲಕ್ನೋ: ಉನ್ನಾವೋ ಗ್ಯಾಂಗ್‌ ರೇಪ್‌ ಪ್ರಕರಣದ ಆರೋಪಿಯಾಗಿರುವ ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌ ಅವರನ್ನು ಇಂದು ಶನಿವಾರ ಏಳು ದಿನಗಳ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ.

ಇಂದು ಶಾಸಕ ಸೆಂಗರ್‌ ಅವರನ್ನು ಲಕ್ನೋ ಕೋರ್ಟಿನಲ್ಲಿ ಹಾಜರುಪಡಿಸಲಾಯಿತು. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತನಗೆ ವಿಶ್ವಾಸವಿದೆ ಎಂದು ಸೆಂಗರ್‌ ಈ ಸಂದರ್ಭದಲ್ಲಿ ಹೇಳಿದರು.

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಗ್ಯಾಂಗ್‌ ರೇಪ್‌ ಗೆ ಸಂಬಂಧಪಟ್ಟು ಸಿಬಿಐ, ಬಿಜೆಪಿ ಶಾಸಕನನ್ನು ಶುಕ್ರವಾರ ರಾತ್ರಿ ಬಂಧಿಸಿ ಸುಮಾರು 17 ತಾಸುಗಳ ಕಾಲ ಪ್ರಶ್ನಿಸಿತು.

ಅತ್ಯಾಚಾರ ಆರೋಪಿ ಶಾಸಕ ಸೆಂಗರ್‌ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತಿರುವುದನ್ನು ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸುವಂತೆ ಅಲಹಾಬಾದ್‌ ಹೈಕೋರ್ಟ್‌ ಸಿಬಿಐಗೆ ಆದೇಶಿಸಿತ್ತು.

-ಉದಯವಾಣಿ

Comments are closed.