ಕರ್ನಾಟಕ

ಮತ ಕೇಳಲು ಬಂದ ಅಭ್ಯರ್ಥಿಗೇ 500 ರೂ ನೀಡಿದ ಮತದಾರ!

Pinterest LinkedIn Tumblr


ಅಂಕೋಲಾ: ಅಭ್ಯರ್ಥಿಗಳು ಮತಕ್ಕಾಗಿ ಮತದಾರರಿಗೆ 500,1000..ಹೀಗೆ ಹಣ ಹಂಚುವುದು ಕೇಳಿದ್ದೀರಿ ಆದರೆ ಅಂಕೋಲಾದಲ್ಲಿ ಮತದಾರರೊಬ್ಬರು ಅಭ್ಯರ್ಥಿಗೆ 500 ರೂಪಾಯಿ ನೀಡಿ ಗಮನ ಸೆಳೆದಿದ್ದಾರೆ.

ಅಂಕೋಲಾದ ಲಕ್ಷ್ಮೀಶ್ವರ ನಗರ ನಿವಾಸಿ ಪ್ರಕಾಶ್‌ ನಾಯ್ಕ ಅವರು ಮತ ಕೇಳಲು ಮನೆಗೆ ಬಂದ ಮಾಜಿ ಸಚಿವ,ಕಾರವಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಆನಂದ್‌ ಅಸ್ನೋಟಿಕರ್‌ ಅವರಿಗೆ 500 ರೂಪಾಯಿ ನೀಡಿ ನಿಮಗೆ ಮತ ಹಾಕುತ್ತೇನೆ ಎಂದಿದ್ದಾರೆ.

ಚುನಾವಣೆ ಬಂದಾಗ ರಾಜಕಾರಣಿಗಳು ಜನರಿಗೆ ಹಣ ನೀಡುತ್ತಾರೆ ಆ ಪ್ರಕ್ರಿಯೆ ನಿಲ್ಲಬೇಕು ಹೀಗಾಗಿ ನಾನು ಅಭ್ಯರ್ಥಿಗೆ ನಾನು ದುಡಿದ ಹಣ ನೀಡಿದ್ದೇನೆ ಎಂದಿದ್ದಾರೆ.

ಕಾರವಾರದಲ್ಲಿ ಈ ಬಾರಿ ಬಿಜೆಪಿಯಿಂದ ರೂಪಾಲಿ ನಾಯ್ಕ, ಕಾಂಗ್ರೆಸ್‌ನಿಂದಹಾಲಿ ಶಾಸಕ ಸತೀಶ್‌ ಸೈಲ್‌ ಮತ್ತು ಆನಂದ್‌ ಅಸ್ನೋಟಿಕರ್‌ ನಡುವೆ ಪ್ರಬಲ ಸ್ಪರ್ಧೆ ಎರ್ಪಟ್ಟಿದೆ.

-ಉದಯವಾಣಿ

Comments are closed.