ಕರ್ನಾಟಕ

ಮಾಜಿ ಶಾಸಕ ರವಿಕಾಂತ ಪಾಟೀಲ ವಿರುದ್ಧ ರೌಡಿಶೀಟರ್‌ ಫೈಲ್‌ ತೆರೆಯಲು ಸೂಚನೆ

Pinterest LinkedIn Tumblr


ವಿಜಯಪುರ: ಭೀಮಾತೀರದ ಖ್ಯಾತಿಯ ಮಾಜಿ ಶಾಸಕ ರವಿಕಾಂತ ಪಾಟೀಲ ವಿರುದ್ದ ರೌಡಿಶೀಟರ್ ಫೈಲ್ ತೆರೆಯಲು ಬೆಳಗಾವಿ ಉತ್ತರ ವಲಯ ಐಜಿ ಅಲೋಕ್ ಕುಮಾರ ಇಂಡಿ ಡಿಎಸ್ಪಿಗೆ ಸೂಚಿಸಿದ್ದಾರೆ.

ಇಂಡಿ ಕ್ಷೇತ್ರದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪರಮಾಪ್ತನಾಗಿದ್ದ ರವಿಕಾಂತ ಪಾಟೀಲ ಮೇಲೆ ರೌಡಿ ಶೀಟರ್ ಫುಲ್ ತೆರೆಯಬೇಕೆಂದವರೂ ತಿಳಿಸಿದ್ದಾರೆ.

ಮಹಾದೇವ್ ಸಾಹುಕಾರ್ ಬೆನ್ನಲ್ಲೆ ಮಾಜಿ ಶಾಸಕ ರವಿಕಾಂತ ಮೇಲೂ ರೌಡಿ ಶೀಟರ್ ಓಪನ್ ಮಾಡುವಂತೆ ಸೂಚಿಸಿದ್ದಾರೆ.

ರವಿಕಾಂತ ಪಾಟೀಲ ಇಂಡಿ ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪಕ್ಷೇತರರಾಗಿ ಮೂರು ಬಾರಿ ಶಾಸಕರಾಗಿದ್ದು ಗಮನಾರ್ಹ ಸಂಗತಿ.

Comments are closed.