ಕರ್ನಾಟಕ

ಅಶ್ಲೀಲ ಆಡಿಯೋ ನನ್ನ ಸಂಭಾಷಣೆ ಅಲ್ಲ: ಶಾಸಕ ಸಿದ್ದು ನ್ಯಾಮಗೌಡ

Pinterest LinkedIn Tumblr


ಬಾಗಲಕೋಟೆ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅಶ್ಲೀಲ ಆಡಿಯೋ ನನ್ನ ಸಂಭಾಷಣೆ ಅಲ್ಲ. ಚುನಾವಣಾ ಸಮಯದಲ್ಲಿ ನಮ್ಮ ಹೆಸರು ಕೆಡಿಸಲು ಈ ರೀತಿ ಮಾಡಿದ್ದಾರೆಂದು ನನಗೆ ಅನಿಸುತ್ತಿದೆ. ಯಾರು ಮಾಡಿದ್ದಾರೆಂಬುದು ನನಗೆ ಗೊತ್ತಿಲ್ಲ. ಇದರ ಬಗ್ಗೆ ತನಿಖೆಯಾಗಬೇಕು. ರಾಜಕೀಯದಲ್ಲಿ ಯಾರು ಮಾಡ್ತಾರೆಂಬುದು ಗೊತ್ತಿಲ್ಲ. ಹೇಗಾಗಿದೆ ಗೊತ್ತಿಲ್ಲ ಎಂದು ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡರ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸಂಭಾಷಣೆ ನನ್ನದಲ್ಲ. ಈ ತರಹ ಆಡಿಯೋ ಹರಿದಾಡುತ್ತಿದೆ ಎಂದು ತಿಳೀತು. ಈಗ ಬಾಗಲಕೋಟೆ ಎಸ್ಪಿ ರಿಷ್ಯಂತ್ ಅವರಿಗೆ ದೂರು ನೀಡಿದ್ದೇನೆ. ಎಸ್ಪಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ಶಾಸಕರು ಹೇಳಿದರು.

Comments are closed.