ಕರ್ನಾಟಕ

44 ವರ್ಷಗಳ ನಿರಂತರ ಕಾನೂನು ಹೋರಾಟಕ್ಕೆ ಜಯ

Pinterest LinkedIn Tumblr


ಮೈಸೂರು: ನಾಲ್ಕು ನೂರು ವರ್ಷಗಳಿಗೂ ಹೆಚ್ಚು ಪರಂಪರೆ ಹೊಂದಿರುವ ರಾಜಮನೆತನದವರ ಸಂಪತ್ತಿನ ಆಸ್ತಿಗೆ ಸರಿಯಾಗಿ ಅಂದಾಜಿಸದೆ, ಆದಾಯ ತೆರಿಗೆ ಇಲಾಖೆ ವಿಧಿಸಿದ್ದ ಹೆಚ್ಚುವರಿ ಆದಾಯ ತೆರಿಗೆ ಹಣವನ್ನು ಬಡ್ಡಿ ಸಮೇತ ವಾಪಸ್ ಮಾಡಿರುವುದು ಯದುವಂಶದವರಲ್ಲಿ ಸಂತಸ ಮನೆ ಮಾಡಿದೆ.

ಆದಾಯಕ್ಕೆ ತಕ್ಕಂತೆ ತೆರಿಗೆ ವಿಧಿಸದೆ ಸಂಪತ್ತಿನ ಮೇಲೆ ಆದಾಯ ತೆರಿಗೆ ವಿಧಿಸುತ್ತಿದ್ದನ್ನು ಪ್ರಶ್ನಿಸಿ ರಾಜಮನೆತನದವರು ನಡೆಸುತ್ತಿದ್ದ 44 ವರ್ಷಗಳ ಕಾನೂನು ಹೋರಾಟಕ್ಕೆ ಕೊನೆಗೂ ಜಯಸಿಕ್ಕಿದ್ದು, ಈಗ ರಾಜಮನೆತನವು ಯಾವುದೇ ಆದಾಯ ಇಲಾಖೆಯ ಬಾಕಿ ಇಲ್ಲದಂತೆ ಮುಕ್ತಗೊಂಡಿದೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.

ನಗರದ ಅರಮನೆಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1975ರಿಂದ ಆದಾಯ ತೆರಿಗೆ ಇಲಾಖೆಯು ರಾಜಮನೆತನಕ್ಕೆ ಸೇರಿದ ಆಸ್ತಿಗಳಿಗೆ ಸಂಬಂಧಿಸಿದಂತೆ ತೆರಿಗೆ ವಿಧಿಸದೆ ಸಂಪತ್ತಿನ ಮೇಲೆ ತೆರಿಗೆ ವಿಧಿಸಿತ್ತು. ಆದರೆ, ಅರಮನೆಯ ಸಂಪತ್ತು ತೆರಿಗೆ, ಆಸ್ತಿ ತೆರಿಗೆ ಗೊಂದಲವಿತ್ತು. ಇದರಿಂದಾಗಿಯೇ ಅನೇಕ ಪ್ರಾಪರ್ಟಿಗಳನ್ನು ಜಪ್ತಿ ಹರಾಜುಗೊಳ್ಳಲು ಕಾರಣವಾಗಿತ್ತು. ಈ ಸಮಸ್ಯೆ ಜಯಚಾಮರಾಜ ಒಡೆಯರ್ ಕಾಲದಿಂದ ಈತನಕ ಮುಂದುವರಿದುಕೊಂಡು ಬಂದಿತ್ತು. ಶ್ರೀಕಂಠತದತ್ತ ನರಸಿಂಹರಾಜ ಒಡೆಯರ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ನಡೆದು ಆರು ಪ್ರಮುಖ ಪ್ರಕರಣಗಳಲ್ಲಿ ಕೋರ್ಟ್ ನಮ್ಮ ಪರವಾಗಿ ತೀರ್ಪುನೀಡಿದೆ ಎಂದರು.

Comments are closed.