ಕರ್ನಾಟಕ

ಮೇಟಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ವಿಜಯಲಕ್ಷ್ಮಿ ಸ್ಪರ್ಧೆ!

Pinterest LinkedIn Tumblr


ಬಾಗಲಕೋಟೆ: ಸಚಿವ ಎಚ್.ವೈ. ಮೇಟಿ ವಿರುದ್ಧ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಸಿಡಿ ಪ್ರಕರಣದ ಸಂತ್ರಸ್ತೆ ವಿಜಯಲಕ್ಷ್ಮೀ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಅನ್ಯಾಯವಾಗಿದೆ ಎಂದು ಪದೇ ಪದೆ ಹೇಳಲಾರೆ. ಅದು ರಾಜ್ಯದ ಜನತೆಗೆ ಗೊತ್ತಿದೆ. ಆದ್ದರಿಂದ ನನ್ನಂತ ಎಷ್ಟೋ ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಈ 2018 ವಿಧಾನ ಸಭಾ ಚುನಾವಣೆಯಲ್ಲಿ ಬಾಗಲಕೋಟೆಯಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕು ಮಹಿಳೆಯರಿಗೆ ಯಾವುದೇ ರೀತಿ ಅನ್ಯಾಯ, ಮೋಸವಾಗದಿರಲು ಜೀವ ಕೊಟ್ಟಾದರೂ ನ್ಯಾಯ ಒದಗಿಸಿಕೊಡುವ ಪ್ರಯತ್ನ ಮಾಡುತ್ತೇನೆ. ನನಗೆ ಎಂಇಪಿ ಪಕ್ಷದಿಂದ ಕರೆ ಬಂತು. ಆದರೆ, ನಾನು ಸ್ವಲ್ಪ ಕಾಲಾವಕಾಶ ಕೊಡಿ ಅಂದಿದ್ದೇನೆ. ಆದರೆ, ನಾನು ಸ್ವತಂತ್ರವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು. ರಾಜಕಾಣದಲ್ಲಿ ಸೋಲು ಗೆಲುವು ಇದ್ದೇ ಇದೆ. ಆದ್ದರಿಂದ ಜನತೆ ನಿಮ್ಮಗಳೆಂದು ನನ್ನ ಆಶೀರ್ವದಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.

Comments are closed.