
ಕೋಲ್ಕೊತಾ : ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಕಳುಹಿಸುತ್ತಿರುವ ಎಸ್ಸೆಮ್ಮೆಸ್ಗಳಿಗೆ ಸಂಬಂಧಿಸಿ ಅತಾರ್ಕಿಕವಾದ ಶುಲ್ಕವನ್ನು ಸಂಗ್ರಹಿಸುತ್ತಿವೆ. ಈ ಸಂಬಂಧ ಆರ್ಬಿಐನ ಸಲಹೆಗಳನ್ನು ಪಾಲಿಸುತ್ತಿಲ್ಲ ಎಂದು ಆರ್ಬಿಐನ ಸಲಹಾ ಮಂಡಳಿಯೊಂದು ಹೇಳಿದೆ.
ಹಣಕಾಸು ವರ್ಗಾವಣೆಗೆ ಸಂಬಂಧಿಸಿ ಗ್ರಾಹಕರಿಗೆ ಬ್ಯಾಂಕ್ ಎಸ್ಸೆಮ್ಮೆಸ್ ಮೂಲಕ ಸಂದೇಶಗಳನ್ನು ರವಾನಿಸುತ್ತದೆ. ಯಾವುದೇ ವಂಚನೆಯಾಗದಂತೆ ತಡೆಯುವುದು ಇದರ ಉದ್ದೇಶ. ಇದಕ್ಕೆ ವಿಧಿಸುವ ಶುಲ್ಕ ಯುಕ್ತವಾಗಿರಬೇಕು ಎಂದು ಆರ್ಬಿಐ ಸೂಚಿಸಿದೆ. ಆದರೆ ಬ್ಯಾಂಕ್ಗಳು ಆ ರೀತಿ ನಡೆದುಕೊಳ್ಳುತ್ತಿಲ್ಲ ಎಂದು ಬ್ಯಾಂಕಿಂಗ್ ನೀತಿ ಸಂಹಿತೆ ಕುರಿತ ಸಲಹಾ ಮಂಡಳಿಯಾದ ಬಿಸಿಎಸ್ಬಿಐ ಅಧ್ಯಕ್ಷ ಎ.ಸಿ ಮಹಾಜನ್ ಹೇಳಿದ್ದಾರೆ.
Comments are closed.