ಕರ್ನಾಟಕ

ಎಕ್ಸೀನಿಯಸ್‌ ಮೀನನ್ನು ಕಂಡರೇಕೆ ಇತರ ಮೀನುಗಳಿಗೆ ಆಗದು?

Pinterest LinkedIn Tumblr


ಎಕ್ಸೀನಿಯಸ್‌ ಮೀನನ್ನು ದೂರವಿಡಲು ಮೀನುಗಳಲ್ಲಿನ ಜಾತಿಯಾಧಾರಿತ ರಾಜಕಾರಣ ಕಾರಣವಲ್ಲ. ವರ್ಣಭೇದವಂತೂ ಅಲ್ಲವೇ ಅಲ್ಲ! ಕಾರಣ ಬೇರೆಯೇ ಇದೆ. ಈ ಮೀನುಗಳಿಗೆ ಇತರ ಮೀನುಗಳಿಗಿರುವಂತೆ ಕಿವಿರುಗಳಿಲ್ಲ. ಇವು ಹಾವಿನಂತೆ ಹರಿದಾಡುವ ತೆಳು ದೇಹ ಪ್ರಕೃತಿಯುಳ್ಳ ಮೀನುಗಳು. ಇದಕ್ಕಿರುವ ಹಲ್ಲುಗಳು ನೂರು.

ಆ ನೂರೂ ಹಲ್ಲುಗಳು ತುಟಿಯ ಕೆಳಗೆ ಹೊಂದಿಕೊಂಡಿವೆ. ದೊಡ್ಡ ಮೀನುಗಳು ಕೈಗೆ ಸಿಕ್ಕ, ಅಲ್ಲಲ್ಲ ಬಾಯಿಗೆ ಸಿಕ್ಕ ಮೀನುಗಳೆಲ್ಲವನ್ನು ಭಕ್ಷಿಸಿದರೂ ಎಕ್ಸೀನಿಯಸ್‌ ಮೀನನ್ನು ಮಾತ್ರ ಹಾಗೇ ಬಿಟ್ಟುಬಿಡುತ್ತವೆ. ಒಂದುವೇಳೆ ಅಪ್ಪಿತಪ್ಪಿ ತಿಂದುಬಿಟ್ಟರೂ ವಾಪಸ್ಸು ಹೊರಕ್ಕೆ ಉಗಿದುಬಿಡುತ್ತವೆ. ಈಗ ನೀವೇ ಹೇಳಿ, ನೀವು ಆಹಾರವನ್ನು ಕ್ಯಾಕರಿಸಿ ಉಗಿಯುವುದು ಯಾವಾಗ? ತಿಂದ ಆಹಾರ ಕೆಟ್ಟದಾಗಿದ್ದಾಗ. ಇಲ್ಲೂ ಎಕ್ಸೀನಿಯಸ್‌ ಮೀನುಗಳನ್ನು ಎಲ್ಲವೂ ದೂರವಿಡುವುದಕ್ಕೆ ಅದೇ ಕಾರಣ. ಅದರ ರುಚಿ ಅಷ್ಟು ಕೆಟ್ಟದಾಗಿದೆ. ತಾನು ಇತರರಿಗೆ ರುಚಿಸುವುದಿಲ್ಲ ಎನ್ನುವುದು ಒಂದು ರೀತಿಯಲ್ಲಿ ಅವಮಾನದ ವಿಚಾರವಾದರೂ ಅದರಿಂದ ಜೀವ ಉಳಿಯಿತೆನ್ನುವುದು ಸಂತಸದ ಮತ್ತು ಸ್ವಾರಸ್ಯಕರ ವಿಚಾರವೇ ಸರಿ!

-ಉದಯವಾಣಿ

Comments are closed.