ರಾಷ್ಟ್ರೀಯ

ರಾಜಸ್ಥಾನದಲ್ಲಿ ಅಂಬೇಡ್ಕರ್‌, ಗಾಂಧೀಜಿ ಪ್ರತಿಮೆ ಧ್ವಂಸ; ಮೂವರ ಸೆರೆ

Pinterest LinkedIn Tumblr


ಅಖ್‌ರೋಲ್‌ : ರಾಜಸ್ಥಾನದ ಅಖ್‌ರೋಲ್‌ ನಲ್ಲಿ ದುಷ್ಕರ್ಮಿಗಳು ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಬುಧವಾರ ತಡರಾತ್ರಿ ಈ ದುಷ್ಕೃತ್ಯ ನಡೆದಿದೆ.

ರಾಜಸ್ಥಾನದ ರಾಜಾ ಸಮಂದ್‌ ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ಅವರ ಎದೆಮಟ್ಟದ ಪ್ರತಿಮೆಯನ್ನು ಅಪವಿತ್ರಗೊಳಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರನ್ನು ಇಂದು ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ. ಬಂಧಿತರನ್ನು ಕುಲದೀಪ್‌ ವಾಲ್ಮೀಕಿ, ಅರವಿಂದ ವಾಲ್ಮೀಕಿ ಮತ್ತು ಅಂಕಿತ್‌ ಗೆಹಲೋತ್‌ ಎಂದು ಗುರುತಿಸಲಾಗಿದೆ.

ಇವರು ಕಳೆದ ಸೋಮವಾರ ನಾಥದ್ವಾರ ಪೊಲೀಸ್‌ ಠಾಣೆ ವ್ಯಾಪ್ತಿಯ ಹೋಲಿಮಾಂಗ್ರಾ ಕಾಲನಿಯಲ್ಲಿನ ಪ್ರತಿಮೆಯನ್ನು ಧ್ವಂಸಗೊಳಿಸಿದ್ದರು. ಬಂಧಿತರನ್ನು ಇಂದು ಗುರುವಾರ ಕೋರ್ಟಿಗೆ ಹಾಜರಪಡಿಸಲಾಯಿತು.

ಮೂವರೂ ಬಂಧಿತರು ವಿದ್ಯಾರ್ಥಿಗಳಾಗಿದ್ದು ಇವರು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ತಮ್ಮ ಸಹಪಾಠಿಗಳೊಂದಿಗೆ ಜಗಳ ಮಾಡಿದ ಬಳಿಕ ಈ ದುಷ್ಕೃತ್ಯ ಎಸಗಿರುವುದಾಗಿ ತನಿಖೆಯಿಂದ ಗೊತ್ತಾಗಿದೆ ಎಂದು ಸಹಾಯಕ ಎಸ್‌ಐ ಶುಕಲಾಲ್‌ ಪಾಂಚೋಲಿ ತಿಳಿಸಿದ್ದಾರೆ.

-ಉದಯವಾಣಿ

Comments are closed.