ಕರ್ನಾಟಕ

ಯದುವೀರ್‌ ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ನಾವು ಯಾರ ಪರವೂ ಪ್ರಚಾರ ಮಾಡಲ್ಲ: ಪ್ರಮೋದಾದೇವಿ ಸ್ಪಷ್ಟನೆ

Pinterest LinkedIn Tumblr

ಮೈಸೂರು: ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದು ನನ್ನ ಪುತ್ರ ಯದುವೀರ್‌ ಈಗಾಗಲೇ ಹೇಳಿದ್ದಾನೆ. ಚುನಾವಣೆಯಲ್ಲಿ ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ. ನಾವು ಜನರ ಸೇವೆ ಮಾಡುತ್ತೇವೆ ಎಂದು ಮೈಸೂರು ರಾಜಮಾತೆ ಪ್ರಮೋದಾದೇವಿ ಒಡೆಯರ್‌ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈಗ ರಾಜಮನೆತನದವರು ರಾಜಕೀಯಕ್ಕೆ ಬರಲ್ಲ. ಯದುವೀರ್‌ಗೆ ಕೂಡ ಇದು ಇಷ್ಟ ಇಲ್ಲ. ನಾವು ಜನ ಸೇವೆ ಮಾತ್ರ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಇತ್ತೀಚೆಗೆ ಮೈಸೂರಿಗೆ ಆಗಮಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು ಕೇವಲ ಸೌಜನ್ಯಯುತವಾದದ್ದು ಎಂದು ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದರು.

ಕೇಂದ್ರ ಸರಕಾರದ ಆದಾಯ ತೆರಿಗೆ ಇಲಾಖೆಯೊಂದಿಗೆ 44 ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟದಲ್ಲಿ ಅಂತಿಮವಾಗಿ ನಮಗೆ ಜಯ ಸಿಕ್ಕಿದೆ.

ಭಾರತ ಸರಕಾರಕ್ಕೆ ನಾವು ಒಂದು ಪೈಸೆಯಷ್ಟು ಆಸ್ತಿ ತೆರಿಗೆಯಾಗಲಿ, ಆದಾಯ ತೆರಿಗೆಯಾಗಲಿ ನೀಡುವಂತಿಲ್ಲ. ನಾವೀಗ ಮುಕ್ತರಾಗಿದ್ದೇವೆ. ಇನ್ನೂ ಆದಾಯ ತೆರಿಗೆ ಇಲಾಖೆಯುವರೇ ನಮಗೆ ನಾವು ಹೆಚ್ಚು ಆದಾಯ ಹಾಗೂ ಆಸ್ತಿ ತೆರಿಗೆ ಪಾವತಿಸಿದ್ದೇವೆ ಎಂದು ನಮ್ಮ ಹಣವನ್ನು ಚೆಕ್ ಮೂಲಕ ವಾಪಸ್‌ ಮಾಡಿದ್ದಾರೆ ಎಂದು ಪ್ರಮೋದ್ ದೇವಿ ಹೇಳಿದರು. ಎಷ್ಟು ಹಣ ಬಂದಿದೆ ಎಂಬುದನ್ನು ಬಹಿರಂಗ ಪಡಿಸಲು ಅವರು ನಿರಾಕರಿಸಿದರು.

ಸುಪ್ರೀಂ ಕೋರ್ಟ್‌ ನಮ್ಮ ಪರವಾಗಿ 2015ರಲ್ಲಿ ತೀರ್ಪು ನೀಡಿತು. ಇದರ ಮುಂದಿನ ಬೆಳವಣಿಗೆ ಇದಾಗಿದೆ ಎಂದು ಪ್ರಮೋದಾದೇವಿ ತಿಳಿಸಿದರು.

Comments are closed.