ರಾಷ್ಟ್ರೀಯ

ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದ ತಾಯಿ ಮೃತದೇಹ ಐಸ್‌ಫ್ರಿಜ್‌ನಲ್ಲಿಟ್ಟಿದ್ದ ಮಗ !

Pinterest LinkedIn Tumblr

ಕೊಲ್ಕತಾ: ತಾಯಿಯ ದೇಹಕ್ಕೆ ಅಂತ್ಯಕ್ರಿಯೆ ಮಾಡುವುದನ್ನು ಬಿಟ್ಟು ಮೃತದೇಹವನ್ನು ‘ಮಮ್ಮಿ’ ತರಹ ಕೆಡದಂತೆ ಐಸ್‌ಫ್ರಿಜ್‍ನಲ್ಲಿ ಇಟ್ಟಿದ್ದ ಘಟನೆ ಕೊಲ್ಕತಾದ ಘೋಲ್ಸಾಪುರದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸುಭಬ್ರತಾ ಮಜುಂದಾರ್ (45) ಹಾಗೂ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ ಎರಡು ಫ್ರಿಜ್‌ಗಳನ್ನು ವಶಪಡಿಸಿಕೊಂಡಿದ್ದು ಒಂದರಲ್ಲಿ ಬಿನಾ ಮಜುಂದಾರ್ (ತಾಯಿ) ಮೃತದೇಹ ಪತ್ತೆಯಾಗಿದೆ. ಬಿನಾ ಮಜುಂದಾರ್ ಅವರು 2015ರಲ್ಲಿ ಮೃತಪಟ್ಟಿದ್ದರು. ತಾಯಿಯ ದೇಹದಿಂದ ಕರುಳನ್ನು ಹೊರತೆಗೆದು ದೇಹ ಕೆಡದಂತೆ ಕೆಲವು ರಾಸಾಯನಿಕಗಳನ್ನು ಬಳಸಿ ಐಸ್‌ಕ್ರೀಂ ಫ್ರಿಜ್‌ನಲ್ಲಿಟ್ಟ ಸುಭಬ್ರತಾ.

ಸುಭಬ್ರತ ಮಜುಂದಾರ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಲೆಧರ್ ಟೆಕ್ನಾಲಜಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ದೇಹ ಕೆಡದಂತೆ ಸಂರಕ್ಷಿಸಲು ಬಳಸುತ್ತಿದ್ದ ಕೆಲವು ರಾಸಾಯನಿಕಗಳನ್ನು ಸುಭಬ್ರತಾ ಮನೆಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸುಭಬ್ರತ ಮಜುಂದಾರ್
ಈ ಬಗ್ಗೆ ಸ್ಥಳೀಯರು ಪ್ರತಿಕ್ರಿಯಿಸಿದ್ದು, ಸುಭಬ್ರತಾ ಅವರ ತಾಯಿ ಬಗ್ಗೆ ಕೇಳಿದಾಗ ಅವರ ದೇಹ ಸ್ವರ್ಗದಲ್ಲಿ ಶಾಂತಿಯಿಂದ ಇದೆ ಎನ್ನುತ್ತಿದ್ದ ಎಂದು ತಿಳಿಸಿದ್ದಾರೆ. 2015ರಲ್ಲಿ ತಮ್ಮ ತಾಯಿ ಹೃದಯಾಘಾತದಿಂದ ತೀರಿಕೊಂಡಿದ್ದಾಗಿ ಸುಭಬ್ರತಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Comments are closed.