
ಬೆಂಗಳೂರು: ಪ್ರೀತಿಸುವುದಿಲ್ಲ ಎಂದಿದ್ದಕ್ಕೆ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯ ವರ್ತನೆ ತೋರಿದ್ದಲ್ಲದೇ ಕೊಲೆ ಮಾಡೋದಾಗಿ ಯುವಕನೊಬ್ಬ ಬೆದರಿಕೆ ಹಾಕಿದ ಘಟನೆ ನಗರದ ಸುಬ್ಬಣ್ಣಪಾಳ್ಯ ಪಾಪಯ್ಯ ಲೇಔಟ್ ನಲ್ಲಿ ನಡೆದಿದೆ.
ಜಾನ್ ಅಸಭ್ಯವಾಗಿ ವರ್ತಿಸಿದ ಯುವಕ. ಏಳು ವರ್ಷದ ಹಿಂದೆ ಜಾನ್ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಕಾರಣಾಂತರಗಳಿಂದ ಇಬ್ಬರ ಪ್ರೀತಿ ಮುರಿದುಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಬಲವಂತವಾಗಿ ಪ್ರೀತಿಸಲು ಜಾನ್ ಯುವತಿಯನ್ನು ಒತ್ತಾಯಿಸುತ್ತಿದ್ದನು.
ಯುವತಿ ಜಾನ್ ಪ್ರೀತಿಯನ್ನು ಒಪ್ಪದಕ್ಕೆ ಕೋಪಗೊಂಡ ಯುವಕ ಆಕೆಯ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯ ವರ್ತನೆ ತೋರಿದ್ದಾನೆ. ಅಷ್ಟೇ ಅಲ್ಲದೇ ನನ್ನ ಬಿಟ್ಟು ಬೇರೆಯವರನ್ನು ಪ್ರೀತಿಸುತ್ತೀಯಾ ಎಂದು ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.