
ಮೈಸೂರು: ಬಿ.ವೈ.ವಿಜಯೇಂದ್ರನ ಅಪ್ಪನಿಗೆ ಬಂದು ನಿಲ್ಲೋಕೆ ಹೇಳಿ. ಬಿಎಸ್ ಯಡಿಯೂರಪ್ಪಗೂ, ವರುಣಾ ಕ್ಷೇತ್ರಕ್ಕೂ ಏನ್ ಸಂಬಂಧ…ಇದು ವಿಜಯೇಂದ್ರ ಸ್ಪರ್ಧೆ ಕುರಿತಂತೆ ಸುದ್ದಿಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದಾಗ ನೀಡಿದ ಪ್ರತಿಕ್ರಿಯೆ!
ಸೋಮವಾರ ಮೈಸೂರು ಜಿಲ್ಲೆಯ ಪ್ರವಾಸದ ಕೊನೆಯ ದಿನದಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಅವರು, ವರುಣಾದಲ್ಲಿ ನನ್ನ ಮಗ ಸ್ಪರ್ಧಿಸಿದ್ರೂ ಸಿಎಂ ಮಗ ಅಂತ ವೋಟ್ ಹಾಕಲ್ಲ. ಯಾರೋ ಬಂದು ನಿಂತ ತಕ್ಷಣ ಅಲ್ಲಿನ ಜನ ಬದಲಾಗಲ್ಲ ಎಂದರು.
ಕಳೆದ 35 ವರ್ಷಗಳಿಂದ ವರುಣಾ ಕ್ಷೇತ್ರದ ಅಭಿವೃದ್ಧಿಗೆ ದುಡಿದಿದ್ದೇನೆ. ಯಡಿಯೂರಪ್ಪ, ಅಮಿತ್ ಶಾ ಹೇಳಿದ ಕೂಡಲೇ ಎಲ್ಲವೂ ನಡೆಯಲ್ಲ. ಯಾರೇ ಬಂದರೂ ಜನ ವೋಟ್ ಹಾಕೋರಿಗೆ ಹಾಕ್ತಾರೆ ಎಂದು ತಿರುಗೇಟು ನೀಡಿದರು.
ವರುಣಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದ್ದರೆ, ಮತ್ತೊಂದೆಡೆ ಸಿದ್ದರಾಮಯ್ಯ ಹಾಗೂ ಪುತ್ರನಿಗೆ ಸೆಡ್ಡು ಹೊಡೆದಿರುವ ಬಿಜೆಪಿ, ಸಿಎಂ ಪುತ್ರ ಯತೀಂದ್ರ ವಿರುದ್ಧ ಬಿಎಸ್ ವೈ ಪುತ್ರ ಬಿವೈ ವಿಜಯೇಂದ್ರ ಅವರನ್ನು ಅಖಾಡಕ್ಕಿಳಿಸಲು ರಣತಂತ್ರ ರೂಪಿಸಿದೆ.
-ಉದಯವಾಣಿ
Comments are closed.