ಕರ್ನಾಟಕ

ನವವಧು ಸಪ್ತಪದಿ ತುಳಿಯುತ್ತಿದ್ದಾಗಲೇ ಎಂಟ್ರಿ ನೀಡಿದ ಭಗ್ನ ಪ್ರೇಮಿಯೊಬ್ಬ ಮಾಡಿದ್ದೇನು ಗೊತ್ತೇ…?

Pinterest LinkedIn Tumblr

ಶಿವಮೊಗ್ಗ: ನವವಧು ಸಪ್ತಪದಿ ತುಳಿಯುತ್ತಿದ್ದಾಗಲೇ ಭಗ್ನ ಪ್ರೇಮಿಯೊಬ್ಬ ಮಧುಮಗಳ ಕುತ್ತಿಗೆಗೆ ಚಾಕುವಿನಿಂದ ಇರಿದ ಘಟನೆ ಸಾಗರ ತಾಲೂಕಿನ ಭೀಮನಕೋಣೆಯಲ್ಲಿ ಸೋಮವಾರ ನಡೆದಿದೆ.

ಭೀಮನಕೋಣೆಯ ಕಾಪ್ಟೆಮನೆಯಲ್ಲಿ ಭರತ್ ಮತ್ತು ಸೀತಾ ವಿವಾಹ ಸಮಾರಂಭ ನಡೆಯುತ್ತಿತ್ತು. ಈ ವೇಳೆ ತಾಳಿ ಕಟ್ಟಿ ಸಪ್ತಪದಿ ತುಳಿಯುತ್ತಿದ್ದಾಗ ಪ್ರಿಯಕರ ಕತ್ತಿಯಿಂದ ವಧು ಸೀತಾ ಕುತ್ತಿಗೆಗೆ ಇರಿದಿದ್ದ.

ಏತನ್ಮಧ್ಯೆ ತಡೆಯಲು ಬಂದ ವಧುವಿನ ಚಿಕ್ಕಪ್ಪ ಗಂಗಾಧರಪ್ಪನ ಮೇಲೂ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕೂಡಲೇ ವಧು ಸೀತಾ ಮತ್ತು ಚಿಕ್ಕಪ್ಪನನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಕತ್ತಿಯಿಂದ ಇರಿದ ಪ್ರಿಯಕರನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.