ಕರ್ನಾಟಕ

ಲಗ್ಗೆರೆಯಲ್ಲಿ ಮೂಟೆಗಟ್ಟಲೆ ಸೀರೆಗಳು ಜಪ್ತಿ; ಮುನಿರತ್ನ ಭಾವಚಿತ್ರ !

Pinterest LinkedIn Tumblr


ಬೆಂಗಳೂರು: ಚುನಾವಣೆಯ ಆಮಿಷ ನೀಡಲು ಹೋಗಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್‌ಕರ್‌ ಅವರು ಸಿಕ್ಕಿ ಬಿದ್ದ ಬೆನ್ನಲ್ಲೇ ಇನ್ನೋರ್ವ ಕಾಂಗ್ರೆಸ್‌ ಶಾಸಕ ಸಿಕ್ಕಿ ಹಾಕಿಕೊಂಡಿದ್ದಾರೆ.

ನಗರದ ಲಗ್ಗೆರೆಯ ಕಡೆಗಳಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಡಲಾಗಿದ್ದ ಮೂಟೆಗಟ್ಟಲೆ ಸೀರೆಗಳು, ಪ್ರೇಷರ್‌ ಕುಕ್ಕರ್‌ಗಳು ಮತ್ತು ಇತರ ವಸ್ತುಗಳನ್ನು ಪೊಲೀಸರು ಭಾನುವಾರ ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಿದ ಸೀರೆಗಳ ಪ್ಯಾಕ್‌ಗಳ ಮೇಲೆ ಕಾಂಗ್ರೆಸ್‌ ಶಾಸಕ ಮುನಿರತ್ನ ಅವರ ಭಾವಚಿತ್ರಗಳಿವೆ.

ಜಿಲ್ಲಾ ಚುನಾವಣಾಧಿಕಾರಿಗಳ ಸೂಚನೆ ಮೇರೆಗೆ ದಾಳಿ ನಡೆಸಿದ್ದು 5 ಪ್ರತ್ಯೇಕ ಸ್ಥಳಗಳಿÉ ಕೂಡಿಡಲಾಗಿದ್ದ ಸೀರೆಗಳು, ಕುಕ್ಕರ್‌, ಮಿಕ್ಸರ್‌ ಮತ್ತು ವಾಟರ್‌ ಕ್ಯಾನ್‌ಗಳನ್ನು ಜಪ್ತಿ ಮಾಡಲಾಗಿದೆ.

ಡಿಸಿಪಿ ಚೇತನ್‌ ಸಿಂಗ್‌ ರಾಠೊಡ್‌ ಮತ್ತಿತರ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು ಇಟ್ಟಿದೆ.

ಬೆಳಗಾವಿ ಜಿಲ್ಲಾಧಿಕಾರಿ ಮನೆಯ ಕೂಗಳತೆ ದೂರದಲ್ಲಿರುವ ಜಾಧವ ನಗರದಲ್ಲಿ ಶನಿವಾರ ಹೆಬ್ಟಾ ಳ್ಕರ್‌ ಅವರ ಭಾವ ಚಿತ್ರವುಳ್ಳ 659 ಕುಕ್ಕರ್‌ ಬಾಕ್ಸ್‌ಗಳಿದ್ದ ಇಡೀ ಲಾರಿಯನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿ ಕೊಂಡು ಲಾರಿ ಚಾಲಕನ ವಿರುದ್ಧ ದೂರು ದಾಖಲಿಸಿಕೊಂಡಿ ದ್ದರು.

-ಉದಯವಾಣಿ

Comments are closed.