ಕರ್ನಾಟಕ

ಚಿತ್ರದುರ್ಗ ಸಿರಿಗೆರೆಯ ತರಳಬಾಳು ಮಠಕ್ಕೆ ಅಮಿತ್‌ ಶಾ ಭೇಟಿ

Pinterest LinkedIn Tumblr

ಚಿತ್ರದುರ್ಗ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳವಾರ ತಾಲ್ಲೂಕಿನ ಸಿರಿಗೆರೆಯ ತರಳಬಾಳು ಮಠಕ್ಕೆ ಭೇಟಿ ನೀಡಿ ಪೀಠಾಧ್ಯಕ್ಷ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.

ಮಧ್ಯಾಹ್ನ 1:37ಕ್ಕೆ ಸಿರಿಗೆರೆ ಕಾಲೇಜು‌ ಮೈದಾನದ ಹೆಲಿಪ್ಯಾಡ್‌ಗೆ ಬಂದಿಳಿದ ಅಮಿತ್ ಶಾ ಅವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಸ್.ನವೀನ್, ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ಸೇರಿದಂತೆ ಬಿಜೆಪಿ ಮುಖಂಡರು ಸ್ವಾಗತಿಸಿದರು.

ಅಮಿತ್ ಶಾ ಮೈದಾನದಲ್ಲಿ ಸೇರಿದ್ದ ಅಭಿಮಾನಿಗಳು, ಕಾರ್ಯಕರ್ತರತ್ತ ಕೈಬೀಸಿದರು.

ಸಿರಿಗೆರೆ ಶ್ರೀಗಳೊಂದಿಗೆ ಮುಕ್ಕಾಲು ತಾಸು ಮಾತಕತೆ ನಡೆಸಿದ ಅಮಿತ್ ಶಾ ರಸ್ತೆ ಮಾರ್ಗವಾಗಿ ಮಾದಾರ ಚನ್ನಯ್ಯ ಗುರುಪೀಠಕ್ಕೆ ತೆರಳಿದರು.

ಮಾದರಿ ಅನುಭವ ಮಂಟಪದಲ್ಲಿರುವ ಅಲ್ಲಮಪ್ರಭು ಮತ್ತಿತರ ಶರಣರ ಪ್ರತಿಕೃತಿಗಳಿಗೆ ಪುಷ್ಪನಮನ ಸಲ್ಲಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮಾಜಿ ಸಚಿವ ಗೋವಿಂದ ಕಾರಜೋಳ, ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಶಾಸಕ‌ ಜಿ.ಎಚ್ ತಿಪ್ಪಾರೆಡ್ಡಿ, ಸಂಸದರಾದ ಪ್ರಹ್ಲಾದ ಜೋಷಿ, ಜಿ.ಎಂ‌.ಸಿದ್ದೇಶ್ವರ್, ಶ್ರೀರಾಮುಲು, ರಾಜ್ಯ ಉಸ್ತುವಾರಿ ಮುರುಳಿಧರ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿ ಭಾಗಿಯಾದರು.

Comments are closed.