ಕರ್ನಾಟಕ

ಈ ಬಾರಿಯ ಚುನಾವಣೆಗೆ ಏ.24 ನಾಮಪತ್ರ ಸಲ್ಲಿಕೆಗೆ ಕೊನೇ ದಿನ; ಅಭ್ಯರ್ಥಿ ಖರ್ಚಿನ ಮಿತಿ ₹28 ಲಕ್ಷ

Pinterest LinkedIn Tumblr

ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣೆ ಮತದಾನ ದಿನಾಂಕ(ಮೇ.12) ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮಂಗಳವಾರದಿಂದ ನೀತಿ ಸಂಹಿತೆ ಜಾರಿಯಾಗಿದೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಏ.24 ಕೊನೇ ದಿನವಾಗಿದೆ.

2018ರ ಕರ್ನಾಟಕ ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ಸಂಬಂಧ ಚುನಾವಣೆ ಆಯೋಗ ಏ.17ರಂದು ಅಧಿಸೂಚನೆ ಹೊರಡಿಸಲಿದೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಏ.24 ಕೊನೆಯ ದಿನವಾಗಿದೆ. ಏ.25ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಏ.27ರ ವರೆಗೂ ಅವಕಾಶವಿದೆ.

ಸಿಒಸಿ (ನೀತಿ ಸಂಹಿತೆ) ಇಂದಿನಿಂದಲೇ ಅನ್ವಯವಾಗಲಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸಶಸ್ತ್ರ ಪಡೆ‌ಬಳಕೆ ಮಾಡಲಾಗುತ್ತದೆ ಎಂದು ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಮಾಹಿತಿ ನೀಡಿದರು. ಅಭ್ಯರ್ಥಿಗೆ ಚುನಾವಣಾ ಪ್ರಚಾರ ಸೇರಿ ಮಾಡಬಹುದಾದ ಒಟ್ಟು ಖರ್ಚಿಗೆ ₹28 ಲಕ್ಷ ಮಿತಿ ನಿಗದಿ ಪಡಿಸಲಾಗಿದೆ.

ಚುನಾವಣಾ ದಿನಾಂಕ ಸೋರಿಕೆ ಹೇಗೆ?
ಭಾರತೀಯ ಚುನಾವಣೆ ಆಯೋಗ(ಇಸಿಐ) ಅಧಿಕೃತವಾಗಿ ಚುನಾವಣಾ ದಿನಾಂಕ ಪ್ರಕಟಿಸುವ ಮೊದಲೇ ಮತದಾನದ ದಿನದ ಮಾಹಿತಿ ಸೋರಿಕೆ ಆಗಿರುವ ಕುರಿತು ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಪ್ರಸ್ತಾಪಿಸಿದರು.

ಈ ಬಗ್ಗೆ ಪರಿಶೀಲಿಸಿ ಕ್ರಮ‌ ಕೈಗೊಳ್ಳುವುದಾಗಿ ಹೇಳಿದರು.

ಇವಿಎಂ ಜತೆಗೆ ವಿವಿ ಪ್ಯಾಟ್‌:
ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆ ಬಗ್ಗೆ ಮತದಾರರಲ್ಲಿರುವ ಅನುಮಾನ ಹೋಗಲಾಡಿಸುವ ಉದ್ದೇಶದಿಂದ ಅವುಗಳ ಜತೆಗೆ ಮತ ಖಾತರಿ ಯಂತ್ರಗಳನ್ನು (ವಿ.ವಿ ಪ್ಯಾಟ್‌) ಬಳಸುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ. ಇವಿಎಂನಲ್ಲಿ ಅಭ್ಯರ್ಥಿ ಭಾವಚಿತ್ರ ಇರಲಿದ್ದು, ಮತದಾರರಿಗೆ ಅಭ್ಯರ್ಥಿ ಗುರುತಿಸಲು ಸಹಕಾರಿಯಾಗಲಿದೆ.

Comments are closed.