ಕರ್ನಾಟಕ

ಸಚಿವ ವಿನಯ್​ ಕುಲಕರ್ಣಿಗೂ ಬಂತು ಬೆದರಿಕೆ ಪತ್ರ

Pinterest LinkedIn Tumblr


ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ವಿನಯ್​ ಕುಲಕರ್ಣಿಗೆ ಬೆದರಿಕೆ ಪತ್ರ ಬಂದಿದೆ. ಸಂಸದ ಪ್ರಲ್ಹಾದ್​ ಜೋಶಿ, ಎಂಎಲ್ಸಿ ಪ್ರದೀಪ್​ ಶೆಟ್ಟರ್​, ಬಸವರಾಜ ಹೊರಟ್ಟಿ ಬಳಿಕ ಈಗ ವಿನಯ್​ ಕುಲಕರ್ಣಿಗೆ ಪತ್ರ ಬಂದಿದೆ.

ಯಾಕೂಬ ಪಠಾಣ, ಯೂಸುಫ್​ ಪಠಾಣ ಎಂಬುವರ ಹೆಸರಿನಲ್ಲಿ ಬಂದಿರುವ ಪತ್ರದಲ್ಲಿ, ನಮ್ಮ ಅಲ್ಲಾನ ಕುರಾನ ಆಣೆಗೂ ನಿಮ್ಮನ್ನು, ನಿಮ್ಮ ಕುಟುಂಬದವರನ್ನು ಬಿಡುವುದಿಲ್ಲ. ಇದು ಧಮಕಿನೂ ಅಲ್ಲ, ಚಿತಾವಣೆನೂ ಅಲ್ಲ. ಹೇಳಿದ್ದನ್ನು ಮಾಡುವ ಮುಸ್ಲಿಂಪಠಾಣರು ನಾವು ಎಂದು ಉಲ್ಲೇಖವಿದೆ.

ಅಷ್ಟೇ ಅಲ್ಲದೆ, ನಾವು ಹೇಳಿದ್ದರೆ ಒಂದು ಮಾತಿಗೆ ಸಾವಿರಾರು ಪಠಾಣರು ಸೇರಿ ನಿಮ್ಮನ್ನು ನಾಶ ಮಾಡುತ್ತಾರೆ ಎಂದು ಬರೆಯಲಾಗಿದ್ದು ಪತ್ರದುದ್ದಕ್ಕೂ ಅವಹೇಳನಕಾರಿ ಮತ್ತು ಅಶ್ಲೀಲ ಪದಗಳ ಬಳಕೆ ಮಾಡಲಾಗಿದೆ ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ವಿನಯ್​, ನಾನು ಇದಕ್ಕೆಲ್ಲ ಹೆದರೋದಿಲ್ಲ. ಹಿಂದೆಯೂ ಸಾಕಷ್ಟು ಸಲ ಇಂಥ ಪತ್ರಗಳು ಬಂದಿವೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದೇನೆ ಎಂದರು.

Comments are closed.