ಕರ್ನಾಟಕ

ಜೀವಂತ ಮಗುವನ್ನು ಮಣ್ಣಲ್ಲಿ ಹೂತುಹಾಕಿದ್ದ ಪಾಪಿಗಳು

Pinterest LinkedIn Tumblr


ಚಿಕ್ಕಬಳ್ಳಾಪುರ: ನವಜಾತ ಗಂಡುಶಿಶುವನ್ನು ಮಣ್ಣಲ್ಲಿ ಹೂತುಹಾಕಿದ್ದ ಅಮಾನವೀಯ ಘಟನೆ ಚಿಂತಾಮಣಿ ತಾಲೂಕಿನ ಗಡದಾಸೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹೊರವಲಯದ ರೇಷ್ಮೆ ತೋಟವೊಂದರಲ್ಲಿ ನವಜಾತ ಗಂಡು ಶಿಶು ಮಣ್ಣಲ್ಲಿ ಹೂತು ಹಾಕಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತೋಟದಲ್ಲಿ ಕಾಗೆಗಳ ಹಾರಾಟ, ಚೀರಾಟ ಕಂಡ ಸ್ಥಳೀಯರು ಹೋಗಿ ನೋಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಅದಕ್ಕೆ ಕುರುಬೂರು ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಆರೈಕೆ ಮಾಡಲಾಗಿದೆ. ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಚಿಂತಾಮಣಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ನಡೆಸುತ್ತಿದ್ದಾರೆ.

Comments are closed.