ಕರ್ನಾಟಕ

ಟಿಕೆಟ್​ ಆಕಾಂಕ್ಷಿಗೆ ಚುನಾವಣೆಗಾಗಿ ಜನರಿಂದಲೇ ಹಣ ಸಂಗ್ರಹ!

Pinterest LinkedIn Tumblr


ಚಿತ್ರದುರ್ಗ: ರಾಜ್ಯ ವಿಧಾನಸಭಾ ಚುನಾವಣೆ ಸಿದ್ಧತೆ ರಂಗೇರುತ್ತಿದ್ದು ಟಿಕೆಟ್​ ಆಕಾಂಕ್ಷಿಗೆ ಜನರೇ ಹಣ ಹೊಂದಿಸಿಕೊಡುತ್ತಿದ್ದಾರೆ.

ಗೂಳಿಹಟ್ಟಿ ಶೇಖರ್​ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿದ್ದು ಅವರು ಪ್ರಚಾರಕ್ಕೆ ಹೋದಲ್ಲೆಲ್ಲ ಜನರು ಹಣ ಸಂಗ್ರಹ ಮಾಡಿಕೊಡುತ್ತಿದ್ದಾರೆ. ಒಂದೇ ದಿನಕ್ಕೆ ಸುಮಾರು 2.50 ಲಕ್ಷ ರೂಪಾಯಿ ಸಂಗ್ರಹವಾಗಿದೆ.

ಹೆಬ್ಬಳ್ಳಿ, ಕಡಿವಾಣಕಟ್ಟೆ, ಹೃರೂರು, ಕಸಬಾ ಹೋಬಳಿ, ಕಬ್ಬಳ, ಕೊಂಡಾಪುರ ಗ್ರಾಮಗಳ ಜನರು ಹಣ ಸಂಗ್ರಹ ಮಾಡಿಕೊಟ್ಟಿದ್ದಾರೆ. ಮಹಿಳಾ ಸಂಘಗಳು, ಯುವಕ ಸಂಘಗಳಿಂದ ದೇಣಿಗೆ ನೀಡಿದ್ದಾರೆ. ಜನರ ಈ ಪ್ರೀತಿಗೆ ಗೂಳಿಹಟ್ಟಿ ಶೇಖರ್​ ಕಣ್ಣೀರಿಟ್ಟಿದ್ದಾರೆ.

Comments are closed.