ಕರ್ನಾಟಕ

ನಾನು ಕೃಷ್ಣರಾಜ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ: ಮಾಳವಿಕಾ ಅವಿನಾಶ್‌

Pinterest LinkedIn Tumblr

ಮೈಸೂರು: ನಾನೂ ಸಹ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ರಾಜ್ಯ ವಕ್ತಾರರೂ ಆಗಿರುವ ನಟಿ ಮಾಳವಿಕಾ ಅವಿನಾಶ್ ಹೇಳಿದರು.

ಮೈಸೂರಿನ ಬಿಜೆಪಿ ನಗರ ಕಚೇರಿಯಲ್ಲಿ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಕೃಷ್ಣರಾಜ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಒಲವು,ಬಯಕೆ ಹೊಂದಿದ್ದೇನೆ. ಅದಕ್ಕಾಗಿ, ಬಿಜೆಪಿ ಸಂಘಟನೆಯಲ್ಲಿ ತೊಡಗಿದ್ದೇನೆ. ನಾನು ಕೆ.ಆರ್. ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ರಾಜ್ಯದ ನಾಯಕರು ಸರಿಯಾದ ಸಮಯದಲ್ಲಿ ಒಳ್ಳೆಯ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಕೆ.ಆರ್.ಕ್ಷೇತ್ರದಿಂದ ನಾನು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ರಾಜ್ಯದ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಕೃಷ್ಣರಾಜದಲ್ಲಿ ಅವಕಾಶ ಮಾಡಿಕೊಟ್ಟರೆ ಸ್ಪರ್ಧೆ ಮಾಡುವೆ. ಇಲ್ಲ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಲ್ಲಲು ಸೂಚಿಸಿದರೂ ಬದ್ಧನಿದ್ದೇನೆ ಎಂದರು. ಮೊದಲಿನಿಂದಲೂ ಕೃಷ್ಣರಾಜ ಬಿಜೆಪಿ ಭದ್ರಕೋಟೆಯಾಗಿದೆ. ಸಣ್ಣಪುಟ್ಟ ಕಾರಣಕ್ಕಾಗಿ ಕಳೆದ ಬಾರಿ ಸೋತಿದ್ದೇವು.ಈಗ ಖಂಡಿತ ಅವಕಾಶವಿದೆ ಎಂದರು.

Comments are closed.