ಕರ್ನಾಟಕ

ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿದ್ದು ಅನ್ಯಾಯದ ಪರಮಾವಧಿ!

Pinterest LinkedIn Tumblr


ದಾವಣಗೆರೆ: ಸಚಿವ ಸಂಪುಟ ಸಭೆ ತೀರ್ಮಾನಿಸಿ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಶಿಫಾರಸು ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಶಾಸಕ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಯೂ ಟರ್ನ್ ಹೊಡೆದಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ ನಿನ್ನೆ ನೀಡಿದ್ದ ಹೇಳಿಕೆಯನ್ನು ನಾನು ವಾಪಾಸ್‌ ಪಡೆಯುತ್ತೇನೆ.ಗೊಂದಲದಲ್ಲಿ ಹೇಳಿಕೆ ನೀಡಿದ್ದೆ’ ಎಂದರು.
ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿರುವುದು ಅನ್ಯಾಯದ ಪರಮಾವಧಿ.ಇದಕ್ಕೆ ನಮ್ಮ ವಿರೋಧವಿದೆ’ ಎಂದರು.

’12 ನೇ ಶತಮಾನಕ್ಕೂ ಹಿಂದೆ ವೀರಶೈವ ಧರ್ಮ ಇರಲಿಲ್ಲ ಎಂದು ನಿರ್ಧಾರ ಮಾಡಿರುವ ಸರ್ಕಾರದ ನಿರ್ಧಾರ ಇಂದು ನನಗೆ ಸ್ಪಷ್ಟವಾಗುತ್ತಿದೆ’ ಎಂದು ಕಿಡಿ ಕಾರಿದರು.

‘ನಿನ್ನೆ ನೀಡಿದ್ದ ಹೇಳಿಕೆಯನ್ನು ನಾನು ವಾಪಾಸ್‌ ಪಡೆಯುತ್ತೇನೆ.ಗೊಂದಲದಲ್ಲಿ ಹೇಳಿಕೆ ನೀಡಿದ್ದೆ’ ಎಂದು ಯೂಟರ್ನ್ ಹೊಡೆದರು.

‘ವೀರಶೈವ-ಲಿಂಗಾಯತ ಎರಡೂ ಒಂದೇ ಎನ್ನುವ ನಮ್ಮ ಮೊದಲಿನ ನಿರ್ಧಾರಕ್ಕೆ ಅಂಟಿಕೊಳ್ಳುತ್ತೇವೆ ಸರ್ಕಾರದ ನಿರ್ಧಾರವನ್ನು ವೀರಶೈವ ಮಹಾಸಭಾ ಒಪ್ಪುವುದಿಲ್ಲ’ ಎಂದರು.

‘ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಮನವಿ ಮಾಡುವುದಿಲ್ಲ, ನಾವು ಬರೆಯುವುದಿಲ್ಲ ಅವರು ಕೇಳುವುದೂ ಇಲ್ಲ’ ಎಂದರು.

ಬೆಂಗಳೂರಿನಲ್ಲಿ ಮಾರ್ಚ್‌ 23 ರಂದು ಸಭೆ ನಡೆಸಿ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

-ಉದಯವಾಣಿ

Comments are closed.