ಕರ್ನಾಟಕ

ದೇವೇಗೌಡ್ರು ಮಕ್ಳು ಗೆದ್ದಿರೋದು ಸಾಕು: ಸಿಎಂ ಟೆಲಿಫೋನ್‌ ಸಂಭಾಷಣೆ ವೈರಲ್‌

Pinterest LinkedIn Tumblr


ಹಾಸನ: ”ಏ ಮಂಜೇಗೌಡ ರಾಜೀನಾಮೆ ಕೊಡ್ತೀನಿ ಅಂತಾ ಕೊಟ್ಟೇ ಇಲ್ವಾಂತೆ?… ನೋಡ್ರಪ್ಪ ಇಷ್ಟು ವರ್ಷ ದೇವೇಗೌಡ್ರು ಮಕ್ಳು ಗೆದ್ದಿದ್ದು ಸಾಕು. ಈ ಬಾರಿ ಮಂಜೇಗೌಡ್ರುನ ಗೆಲ್ಸಿ,” ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧ್ವನಿ ವಾಟ್ಸ್‌ಆ್ಯಪ್‌ನಲ್ಲಿ ವೈರಲ್‌ ಆಗಿ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದೆ.

ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಆರ್‌ಟಿಒ ಅಧಿಕಾರಿ ಬಾಗೂರು ಮಂಜೇಗೌಡರನ್ನು ಕುರಿತು ಮೊಬೈಲ್‌ ಸಂಭಾಷಣೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸಂಭಾಷಣೆ

ಸಿಎಂ: ಏ ಮಂಜೇಗೌಡ ರಾಜೀನಾಮೆ ಕೊಡ್ತೀನಿ ಅಂತಾ ಕೊಟ್ಟೇ ಇಲ್ವಾಂತೆ?

ಬಾಗೂರು: ಕೊಡನಾ ಅಂತಾ ಬೆಳಗ್ಗೆ ಬಂದೆ. ನೀವಿರ್ಲಿಲ್ಲ ಹೊಳೆನರಸೀಪುರಕ್ಕೆ ಬಂದಿದ್ದೀನಿ.

ಸಿಎಂ: ಅಲ್ಲಿದ್ದೀಯಾ, ಮೊದ್ಲು ಬಂದು ರಾಜೀನಾಮೆ ಕೊಡು. ಯಾವ್‌ ಆಫೀಸರ್‌ಗೆ ಕೊಡ್ಬೇಕು ಕೋಟ್ಬಿಡು. ಅವ್ರಿಗೆ ಹೇಳ್ತೀನಿ ಅಕ್ಸೆಫ್ಟ್‌ ಮಾಡಲಿಕ್ಕೆ.

ಬಾಗೂರು: ಸಾರ್‌ ಸೋಮಣ್ಣ ಅಂತ ಇದ್ದಾರೆ ಒಂದ್‌ ಮಾತುಕೇಳಿ ಕೊಡ್ತೀನಿ…!

ಸೋಮಣ್ಣ: ನಮಸ್ಕಾರ ಸರ್‌ ಮಂಜಣ್ಣನವ್ರು ನಮಿಗ್‌ಕೊಟ್ರು ಫೋನಾ…ಸಿಎಂ ಅಂತಾವಾ! ಊರಿಗ್‌ ಬಂದೌವ್ರೆ ಹಳೇಕೋಟೆ ಹೋಬ್ಳಿಲಿ ಇದ್ದಾರೆ.

ಸಿಎಂ: ಮಂಜೇಗೌಡನನ್ನು ಕ್ಯಾಂಡಿಟೇಡ್‌ ಮಾಡ್ತೀವಿ ಎಲ್ರು ಸೇರಿ ಮಂಜೇಗೌಡನನ್ನು ಗೆಲ್ಲಿಸಬೇಕು, ಸಾಕು ದೇವೇಗೌಡ್ರು ಮಕ್ಳು ಗೆದ್ದಿರೋದು.

ಸೋಮಣ್ಣ: ಹೇಳಿಸಾರ್‌ ?

ಸಿಎಂ: ದೇವೇಗೌಡ್ರು ಮಕ್ಳು ಗೆದ್ದಿರೋದು ಸಾಕಯ್ಯ…!

ಸೋಮಣ್ಣ: ಅದ್ಕೆ ನಿಮ್‌ ಸಹಕಾರವೂ ಬೇಕು, ಮೊದ್ಲೆಲ್ಲ ಅವ್ರಿಗೆ ಮಾಡ್ಕಬಿಟ್‌ ಈಗ್‌ ಹೇಳ್ತಿರಲ್ಲ ಅಂಗಂತವಾ.

ಸಿಎಂ: ಏ ಮೊದ್ಲೆಲ್ಲ ಅಂದ್ರೆ ಜೊತೇಲಿ ಇದ್ದಾಗ.

ಸೋಮಣ್ಣ: ಈ ಸಾರಿನೇ ಮಾಡಿದ್ದೀರಲ್ಲ. ಒಂದ್‌ ರೋಡು ಬಿಡ್ದಂಗ್‌ ಮುಚ್ಚಿ ಹಾಕೌರೆ. ನೀವು ಅದ್ರಲ್ಲಿ ಮಟ್ಟಹಾಕುದ್ರೆ ತಾನೇ ಎಲ್ಲದ್ರಲ್ಲೂ ಮಟ್ಟಾಹಾಕೋದು.

ಸಿಎಂ: ಅದು ಕ್ಷೇತ್ರದ ಕೆಲ್ಸಕ್ಕೆ ದುಡ್‌ ಕೊಟ್ಟಿದ್ದೇನೆ ಹೊರ್ತು ರಾಜ್ಕೀಯವಾಗಿ ಬೆಂಬಲ ಇಲ್ಲ ಅವ್ನಿಗೆ.

ಸೋಮಣ್ಣ: ಸರಿ ಬುಡಿ ಸಾರ್‌.

ಬಾಗೂರು: ಸಾರ್‌, ಸಾರ್‌…

ಸಿಎಂ: ಏ.ಮಂಜೇಗೌಡ ಮೊದ್ಲು ರಾಜೀನಾಮೆ ಕೊಟ್‌ ಆಮೇಲ್‌ ಹೊಳೆನರಸೀಪುರಕ್ಕೆ ಹೋಗು ಅಂಗೇಹೋದ್ರೆ ಹೆಂಗೆ.

ಬಾಗೂರು: ಸಾರ್‌, ಬೆಳಗ್ಗೆ ಬರ್ತೀನಿ ಸಾರ್‌.

Comments are closed.