ರಾಷ್ಟ್ರೀಯ

ಮೋಹನ್ ಭಾಗವತ್‌ಗೆ ಯಾಕಿಲ್ಲ ಟ್ವಿಟರ್, ಫೇಸ್‌ಬುಕ್ ಖಾತೆ?

Pinterest LinkedIn Tumblr


ಹೊಸದಿಲ್ಲಿ: ‘ಇದು ನಮ್ಮನ್ನು ಸ್ವಾರ್ಥ ಮತ್ತು ಸ್ವಯಂ ಕೇಂದ್ರಿತವನ್ನಾಗಿ ಮಾಡುತ್ತದೆ’ ಎಂಬ ಕಾರಣಕ್ಕೆ ತಾವು ಟ್ವಿಟರ್ ಅಥವಾ ಫೇಸ್‍ಬುಕ್ ಖಾತೆಯನ್ನು ಹೊಂದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಮೋಹನ್ ಭಾಗವತ್ ಹೇಳಿದ್ದಾರೆ.

ಆದರೆ ಸಂಸ್ಥೆಗಳು ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುತ್ತಿರುವ ಬಗ್ಗೆ ತಮ್ಮದೇನು ಅಭ್ಯಂತರ ಇಲ್ಲ. ವೈಯಕ್ತಿಕವಾಗಿ ತಮ್ಮನ್ನು ಬಿಂಬಿಸಿಕೊಳ್ಳುವುದಕ್ಕೆ ವಿರೋಧವಿದ್ದು ಸಂಸ್ಥೆಗಳು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಆರ್‌ಎಸ್‍ಎಸ್ ಮುಖವಾಣಿ ‘ಆರ್ಗನೈಸರ್’ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದು, ನಾವು ತಂತ್ರಜ್ಞಾನದ ಗುಲಾಮರಾಗಬಾರದು. ನಾವು ಅದನ್ನು ಮಿತಿಗಳಲ್ಲಿ ಬಳಸಬೇಕು ಎಂದು ಭಾಗವತ್ ಎಚ್ಚರಿಸಿದ್ದಾರೆ.

ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಈ ವೇದಿಕೆಗಳು ಹೆಚ್ಚಿನ ಮೌಲ್ಯ ನೀಡುತ್ತವೆ. ಆದರೆ ಅದನ್ನು ಬಳಸುವಾಗ ತುಂಬಾ ಎಚ್ಚರದಿಂದ ಇರಬೇಕು. ವೈಯಕ್ತಿಕವಾಗಿ ಹೇಳುವುದಾದರೆ ಇದು ಸ್ವಾರ್ಥ ಮತ್ತು ಸ್ವಯಂ ಕೇಂದ್ರಿತವಾಗುತ್ತದೆ ಎಂಬ ಕಾರಣಕ್ಕೆ ತಾವು ಯಾವುದೇ ಟ್ವಿಟರ್ ಅಥವಾ ಫೇಸ್‍ಬುಕ್ ಖಾತೆ ಹೊಂದಿಲ್ಲ ಎಂದಿದ್ದಾರೆ.

Comments are closed.