ಕರ್ನಾಟಕ

ಲಿಂಗಾಯತ ಧರ್ಮಕ್ಕೆ ಶಿಫಾರಸು: ಸಿದ್ದಗಂಗಾ ಕಿರಿಯ ಶ್ರೀ ಸ್ವಾಗತ

Pinterest LinkedIn Tumblr


ತುಮಕೂರು: ಲಿಂಗಾಯತರನ್ನು ಧಾರ್ಮಿಕ ಅಲ್ಪಸಂಖ್ಯಾಕರೆಂದು ಗುರುತಿಸಬೇಕು ಎಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದನ್ನು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ಅವರು ಸ್ವಾಗತಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು ‘ಇದೊಂದು ಸ್ವಾಗತಾರ್ಹ ಬೆಳವಣಿಗೆ ಎಂದರು. ಲಿಂಗಾಯತರಲ್ಲಿ ಅವರು ಇವರು ಬೇಧ ಇಲ್ಲ, ಯಾವ ರೀತಿಯ ಸ್ಥಾನ ಮಾನ ಕೊಡುತ್ತಾರೆ ಅನ್ನುವುದು ಇನ್ನು ತಿಳಿದು ಬರಬೇಕು. ಇದೊಂದು ಒಳ್ಳೆಯ ಬೆಳವಣಿಗೆ.ಕೇಂದ್ರ ಸರ್ಕಾರ ಯಾವ ತೀರ್ಮಾನ ಕೈಗೊಳ್ಳುತ್ತದೆ ಕಾದು ನೋಡಬೇಕು’ ಎಂದರು.

ಇದೇ ವೇಳೆ ‘ಹಿಂದು ಧರ್ಮ ಒಡೆಯಲು ಸಾಧ್ಯವಿಲ್ಲ, ಜೈನ, ಬೌದ್ಧ ಧರ್ಮವೂ ಹಿಂದು ಧರ್ಮದಲ್ಲಿದೆ ಅವರು ಅನೇಕ ಹಿಂದು ಧರ್ಮದ ಆಚರಣೆಗಳನ್ನು ಪಾಲಿಸುತ್ತಾರೆ. ಹಿಂದು ಧರ್ಮದಲ್ಲಿನ ಕೆಲ ಪದ್ಧತಿಗಳನ್ನು ನಾವು ಒಪ್ಪುವುದಿಲ್ಲ. ಲಿಂಗಾಯತದಲ್ಲಿ ವರ್ಣಾಶ್ರಮ ಪದ್ಧತಿಗೆ ವಿರೋಧವಿದೆ’ ಎಂದರು.

-ಉದಯವಾಣಿ

Comments are closed.